ಕೂರಹ ಮುಟ್ಟದೆ, ಕೂದಲು ಹರಿಯದೆ, ಬೋಳಾಗಬೇಕು.
ಕಾಯ ಬೋಳೋ? ಕಪಾಲ ಬೋಳೋ?
ಹುಟ್ಟುವುದು ಬೋಳೋ? ಹುಟ್ಟದೆ ಹೋಹುದು ಬೋಳೋ?
ಆವುದು ಬೋಳು ಹೇಳಾ?
ಹುಟ್ಟದೆ ಹೊಂದದೆ ಹೋದುದು ಬೋಳು ಕಾಣಾ
ಗುಹೇಶ್ವರಾ.
Transliteration Kūraha muṭṭade, kūdalu hariyade, bōḷāgabēku.
Kāya bōḷō? Kapāla bōḷō?
Huṭṭuvudu bōḷō? Huṭṭade hōhudu bōḷō?
Āvudu bōḷu hēḷā?
Huṭṭade hondade hōdudu bōḷu kāṇā
guhēśvarā.
Hindi Translation तलवार न छुए, केश न खींचे मुंड होना चाहिए।
शरीर मुंडा, कपाल मुंडा?
जनन मुंडा, बिना जनन मुंडा,गुहेश्वरा ?
Translated by: Eswara Sharma M and Govindarao B N
Tamil Translation கத்திதீண்டாது, கூந்தலைவலியப்பறிக்காது
முண்டனமாகவேண்டும் உடல் முண்டனமோ?
கபாலம் முண்டனமோ, பிறப்பதுமுண்டனமோ தோன்றாமலே
செல்வது முண்டனமோ குஹேசுவரனே
Translated by: Smt. Kalyani Venkataraman, Chennai
ಶಬ್ದಾರ್ಥಗಳು ಕಪಾಲ = ಮತಿ; ಕಾಯ = ಸ್ಥೂಲಕಾಯ; ಕೂರುಹು = ಅಲಗು; ಬೋಳಾಗು = ಕೇಶರಹಿತವಾಗು, ಬರಿದಾಗು; ಹರಿ = ಕಿತ್ತು ತೆಗೆ; ಹುಟ್ಟದೆ ಹೋಹುದು = ಹುಟ್ಟಿದಂತಾಗಬೇಕಾದ ಜೀವಭಾವ ಮತ್ತು ಕ್ಲೇಶಗಳು; ಹುಟ್ಟುವುದು = ಕಾಯ, ಕೂದಲು;
Written by: Sri Siddeswara Swamiji, Vijayapura