ವಚನ - 532     
 
ನೆಲವಿಲ್ಲದ ಭೂಮಿಯ ಮೇಲೊಂದು ಗಿಡು ಹುಟ್ಟಿತ್ತು! ಅ ಗಿಡುವಿಂಗೆ ಸಿಡಿಲ ಬಣ್ಣದವೆಂಟು ಹೂವಾದವು ನೋಡಾ. ಕೊಂಬಿನೊಳಗೆ ಫಲದೋರಿ ಬೇರಿನೊಳಗೆ ಹಣ್ಣಾಯಿತ್ತು! ಆರೂ ಕಾಣದ ಠಾವಿನಲ್ಲಿ ತೊಟ್ಟು ಬಿಟ್ಟು ಬಿದ್ದ ಹಣ್ಣ ಮಹಾಜ್ಞಾನಾರೂಢನಾಗಿ ನಿರ್ಭಾವಹಸ್ತದಿದ ಪಿಡಿದು ಮೆದ್ದವನಲ್ಲದೆ ಶರಣನಲ್ಲ ಗುಹೇಶ್ವರಾ.