ಕಲ್ಯಾಣವರಿಯೆ ಕಟಕವರಿಯೆ ಬೇಂಟೆಯನಾಡುತ್ತಿದ್ದೆ.
ಎನ್ನ ಕೈ ನೋಡಿ ಭೋ, ಕಲಿ ವೀರ ಸುಭಟರು.
ಎನ್ನ ಕೈ ನೋಡಿ ಭೋ, ಅರುಹಿರಿಯರು.
ಕಾದಿ ಗೆಲಿದು ಗುಹೇಶ್ವರಲಿಂಗದಲ್ಲಿಗೆ ತಲೆವರಿಗೆಯನಿಕ್ಕಿ ಬಂದೆ,
ಎನ್ನ ಕೈ ನೋಡಿ ಭೋ!
Art
Manuscript
Music Courtesy:
Video
TransliterationKalyāṇavariye kaṭakavariye bēṇṭeyanāḍuttidde.
Enna kai nōḍi bhō, kali vīra subhaṭaru.
Enna kai nōḍi bhō, aruhiriyaru.
Kādi gelidu guhēśvaraliṅgadallige talevarigeyanikki bande,
enna kai nōḍi bhō!
Hindi Translationकल्याण जाने, कटक जानने जैसे शिकार खेलता था।
मेरा हाथ देखो, भो कलिवीर सुभट;
मेरा हाथ देखो ! जानेमाने बुजुर्ग।
लड़जीत कर गुहेश्वर लिंग तक
ढाल पकडे आया मेरा हाथ देखो भो।
Translated by: Eswara Sharma M and Govindarao B N
English Translation
Tamil Translationஉலகம் அறியும் வண்ணம், சரணர்குழாம் அறியுமாறு
வேட்டையாடுகிறேன். என் கைகளைக் காண்மின்
வெற்றியின் சின்னம். ஈடு இணையற்ற சரணர்
என் கைகளைக் காண்மின், சிவானுபவம் பெற்றவர்
போரிலேவென்று, குஹேசுவரலிங்கத்திடம்
தலையைக் காக்கும் பலகையைத் தரித்து
வந்துள்ள என் கைகளைக் காண்மின்.
Translated by: Smt. Kalyani Venkataraman, Chennai
Telugu Translation
Urdu Translation
ಸ್ಥಲ -
ಶರಣಸ್ಥಲ
ಶಬ್ದಾರ್ಥಗಳುಅರಿಯೆ = ಅರಿಯುವಂತೆ, ತಿಳಿದಿರುವಂತೆ; ಅರುಹಿರಿಯರು = ಅನುಭಾವಿಗಳು; ಕಟಕ = ಸೇನೆ, ಶರಣರ ಬಳಗ; ಕಲಿವೀರ ಸುಭಟರು = ವೀರಾಗ್ರಣಿಗಳಾದ ಶರಣರು; ಕಲ್ಯಾಣ = ಕಲ್ಯಾಣದ ಸಮಸ್ತರು, ಲೋಕದವರೆಲ್ಲರು; ತಲೆವರಿಗೆ = ರಕ್ಷಕವಾದ ಗುರಾಣಿ, ತಲೆಯ ರಕ್ಷಿಸುವ ಘಲಕ, ಶಿವೋsಹಂ ಎಂಬ ಪವಿತ್ರ ಭಾವ; ಬೇಂಟೆಯಾಡು = ಅರಣ್ಯದ ಮೃಗಗಳನ್ನು ಬೆನ್ನುಹತ್ತಿ ಕೊಲ್ಲು, ಸಂಸಾರವೆಂಬ ಮೃಗವನ್ನು ಈಡಾಡು; Written by: Sri Siddeswara Swamiji, Vijayapura