•  
  •  
  •  
  •  
Index   ವಚನ - 549    Search  
 
ಅತಿರಥ ಸಮರಥರೆನಿಪ ಹಿರಿಯರೆಂಬವರುಗಳೆಲ್ಲ, ಮತಿಗೆಟ್ಟು ಮರುಳಾದರಲ್ಲಾ! ದೇವ ಸತ್ತ, ಬ್ರಹ್ಮ ಹೊತ್ತ, ವಿಷ್ಣು ಕಿಚ್ಚ ಹಿಡಿದ. ಗಂಗೆಗೌರಿಯರಿಬ್ಬರು ಬರು ಮುಂಡೆಯರಾದರು. ಇದ ಕಂಡು ಬೆರಗಾದೆ ಗುಹೇಶ್ವರಾ.
Transliteration Atiratha samaratharenipa hiriyarembavarugaḷella, matigeṭṭu maruḷādarallā! Dēva satta, brahma hotta, viṣṇu kicca hiḍida. Gaṅgegauriyaribbaru baru muṇḍeyarādaru. Ida kaṇḍu beragāde guhēśvarā.
Hindi Translation अतिरथ समरथ कहने वीर मूर्ख बनकर पागल हुए ! देव मरा, ब्रह्म ने उठाया, विष्णु ने आग पकडी गंगा गौरी दोनों विधवा हुई। इसे देख चकित हुआ गुहेश्वरा । Translated by: Eswara Sharma M and Govindarao B N
Tamil Translation போர்புரிவோர் வீரர், பெரியோர் அறிவிழந்து மருளடைந்தனரன்றோ! இறைமறைந்தது, உடலிருந்தவாறே இருந்தது மனம் தாபம் கொண்டது, ஞானசக்தி இச்சா சக்திகள் பயனற்றுப் போயினர் இதைக்கண்டு வியப்புற்றேன் குஹேசுவரனே! Translated by: Smt. Kalyani Venkataraman, Chennai
ಶಬ್ದಾರ್ಥಗಳು ಅತಿರಥರು = ಅಸಾಮಾನ್ಯ ಯೋಧರು; ಇದ = ಸಾಧಕರ ಈ ವಿಚಿತ್ರ ಪರಿಸ್ಥಿತಿಯನ್ನು ; ಕಂಡು = ಎಲ್ಲೆಡೆ ನೋಡಿ, ; ಗಂಗೆಗೌರಿಯರು = ಜೀವನಸಂಗಾತಿಗಳಾದ ಜ್ಞಾನಶಕ್ತಿ-ಇಚ್ಚಾಶಕ್ತಿಗಳು; ದೇವ ಸತ್ತ = ಶಿವದರ್ಶನವಾಗಲಿಲ್ಲ; ಬೆರೆಗಾದೆ = ಅಚ್ಚರಿಪಟ್ಟೆ; ಬ್ರಹ್ಮ ಹೊತ್ತ = ದೇಹವು ಜಡವಾಗಿಯೇ ಉಳಿಯಿತು; ಮತಿಗೆಟ್ಟು = ಶಿವಾನುಭೂತಿಯಿಂದ ವಂಚಿತರಾಗಿ; ಮರುಳಾಗು = ಹುಚ್ಚರಾಗು, ದಿಗ್ಘ್ರಮೆಗೊಳ್ಳು, ಹತಾಶರಾಗು; ಮುಂಡೆಯರಾದರು = ನಿಷ್ಕಲರಾದರು; ವಿಷ್ಣು ಕಿಚ್ಚ ಹಿಡಿದ = ಮನಸ್ಸು ಸಂಸಾರತಾಪಕ್ಕೆ ಒಳಗಾಯಿತು; ಸಮರಥರು = ಮಹಾವೀರರು; ಹಿರಿಯರು = ಶ್ರೇಷ್ಠರು, ಹಿರಿಯ ಸಾಧಕರು; Written by: Sri Siddeswara Swamiji, Vijayapura