ಕೆಂಡದ ಮಳೆ ಕರೆವಲ್ಲಿ ಉದಕವಾಗಿರಬೇಕು.
ಜಲಪ್ರಳಯವಾದಲ್ಲಿ ವಾಯುವಿನಂತಿರಬೇಕು.
ಮಹಾಪ್ರಳಯವಾದಲ್ಲಿ ಆಕಾಶದಂತಿರಬೇಕು.
ಜಗತ್ಪ್ರಳಯವಾದಲ್ಲಿ ತನ್ನ ತಾ ಬಿಡಬೇಕು.
ಗುಹೇಶ್ವರನೆಂಬ ಲಿಂಗ ತಾನಾಗಿರಬೇಕು.
Hindi Translationअंगार वर्षा बरसे तो उदक जैसे रहना।
जल प्रलय हो तो वायु जैसे रहना।
महा प्रलय हो तो आकाश जैसे रहना।
जगत् प्रलय हो तो अपने आप को छोड़ना,
गुहेश्वर जैसा लिंग खुद रहना।
Translated by: Eswara Sharma M and Govindarao B N
English Translation If it rains fire
you have to be as the water;
if it is a deluge of water
you have to be as the wind;
if it is the Great Flood,
you have to be as the sky;
and if it is the Very Last Flood of all the worlds,
you have to give up self
and become the Lord.
Translated by: A K Ramanujan Book Name: Speaking Of Siva Publisher: Penguin Books
---------------------
Tamil Translation தணல்மழை பொழியின், நீராக இருத்தல் வேண்டும்,
வெள்ளப்பெருக்கிலே வாயுவனைய இருத்தல் வேண்டும்.
மகாபிரளயத்தில் ஆகாயமனைய இருத்தல் வேண்டும்
உலகம் அழியும் பொழுது, தன்னத்தான் விடல்வேண்டும்
குஹேசுவரனெனும் இலிங்கமேதானாக இருத்தல் வேண்டும்.
Translated by: Smt. Kalyani Venkataraman, Chennai
Telugu Translation
Urdu Translation
ಸ್ಥಲ -
ಶರಣಸ್ಥಲ
ಶಬ್ದಾರ್ಥಗಳುಉದಕವಾಗಿರು = ಉದಕದಂತೆ ಶಾಂತವಾಗಿರು; ಕೆಂಡದ ಮಳೆ = ದ್ವೇಷರೂಪ ಅಗ್ನಿಯ ಮಳೆ; ಜಗತ್ಪ್ರಳಯ = ಸಮಸ್ತ ಪ್ರಕೃತಿವಿಸ್ತಾರವಾದ ಪ್ರಳಯ; ಜಲಪ್ರಳಯವಾಗು = ಎಲ್ಲವೂ ಜಗದಲ್ಲಿ ಮುಳುಗಿಹೋಗು, ಜಲಾವೃತವಾಗು; ತನ್ನ ತಾ ಬಿಡು = ಜೀವಭಾವವನ್ನು ಪರಿತ್ಯಜಿಸು; ಮಹಾಪ್ರಳಯ = ಸ್ಥಾವರ-ಜಂಗಮವಾದ ಜೀವಜಗತ್ತೆಲ್ಲ ಕಾಲವಶವಾಗುವುದು; Written by: Sri Siddeswara Swamiji, Vijayapura