•  
  •  
  •  
  •  
Index   ವಚನ - 558    Search  
 
ನಾ ದೇವನಲ್ಲದೆ ನೀ ದೇವನೆ? ನೀ ದೇವನಾದಡೆ ಎನ್ನನೇಕೆ ಸಲಹೆ? ಆರೈದು, ಒಂದು ಕುಡಿತೆ ಉದಕವನೆರೆವೆ, ಹಸಿದಾಗ ಒಂದು ತುತ್ತು ಓಗರವನಿಕ್ಕುವೆ. ನಾ ದೇವ ಕಾಣಾ ಗುಹೇಶ್ವರಾ!
Transliteration Nā dēvanallade nī dēvane? Nī dēvanādaḍe ennanēke salahe? Āraidu, ondu kuḍite udakavanereve, hasidāga ondu tuttu ōgaravanikkuve. Nā dēva kāṇā guhēśvarā!
Music Courtesy: Provided to YouTube by Mars Inc Naa Devanallade · Ambayya Nuli Vachana Naada ℗ Akash Audio Released on: 2022-05-21
Hindi Translation मैं ही देव क्या तुम देव हो ? यदि तुम देव हो तो मुझे क्यों नहीं पालते ? गौरव से चुल्लू भर जल दूँगा, भूखे हो तो एक कौर आहार दूँगा, मैं देव देखो गुहेश्वरा । Translated by: Eswara Sharma M and Govindarao B N
Tamil Translation நான் இறைவனன்றி நீ இறைவனா? நீ இறைவனாயின் எனக்கு ஏன் அருளாய்? கௌரவித்து கையளவு நீரைத் தெளிப்பேன் பசிவந்துறின் ஒரு கவளம் படையலைப்படைப்பேன். நான் இறைவன் காணாய் குஹேசுவரனே Translated by: Smt. Kalyani Venkataraman, Chennai
ಶಬ್ದಾರ್ಥಗಳು ಆರಯ್ = ಗೌರವಿಸು, ಆದರಿಸು; ಎರೆ = ಹನಿಸು; ಓಗರ = ಎಡೆ, ನೈವೇದ್ಯ, ಅನ್ನ; ಕುಡಿತೆ = ಬೊಗಸೆ, ಸೆರೆ; ಸಲಹು = ರಕ್ಷಿಸು; Written by: Sri Siddeswara Swamiji, Vijayapura