•  
  •  
  •  
  •  
Index   ವಚನ - 560    Search  
 
ಕಲ್ಲ ಹೋರಿನೊಳಗೊಂದು ಕಾರ್ಯವ ಕಾಬಡೆ ಕಲ್ಲ ಬೆದಕದೆ ಕಪ್ಪೆಯ ಸೋಂಕದೆ ಅಲ್ಲಿಯ ಉದಕವ ಕುಡಿಯ ಬಲ್ಲಡೆ ಅದು ಯೋಗ. ಬಲ್ಲಡೆ ನಿಮ್ಮಲ್ಲಿ ನೀವೆ ತಿಳಿದು ನೋಡಿರೆ. ಅರಿವ ಯೋಗಕ್ಕಿದು ಚಿಹ್ನವಯ್ಯಾ: ಕಲ್ಲು ಕಪ್ಪೆಯೊಳಗಣ ಹುಲ್ಲುರಿಯದೆ ಅಟ್ಟುಂಬತೆ ಗುಹೇಶ್ವರಾ.
Transliteration Kalla hōrinoḷagondu kāryava kābaḍe kalla bedakade kappeya sōṅkade alliya udakava kuḍiya ballaḍe adu yōga. Ballaḍe nim'malli nīve tiḷidu nōḍire. Ariva yōgakkidu cihnavayyā: Kallu kappeyoḷagaṇa hulluriyade aṭṭumbate guhēśvarā.
Hindi Translation पत्थर के बिल में एक काम करे तो पत्थर हिलाये बिना, मेंढक न छुए, वहाँ का जल पी सकते हो तो वह योग । समझे तो तुममें तुम जान लो यह ज्ञान योग का चिह्न है। पत्थर मेंढक की घास बिना जले पका खाना जैसे गुहेश्वरा Translated by: Eswara Sharma M and Govindarao B N
Tamil Translation கற்குகையினுள்ளே ஒரு செயலைக் காண விழையின் கல்லை அசைக்காது, தவளையைத் தீண்டாது. ஆங்குள்ள நீரை அருந்தவியன்றால் அது யோகம்! வல்லீரெனின் உங்களை நீங்களே அறிந்து காண்மின் அறியும் யோகத்திற்கு இது சின்னம் ஐயனே. கல், தவளையிலுள்ள புல் ஒளிராது சமைத்துண்பதனையது குஹேசுவரனே! Translated by: Smt. Kalyani Venkataraman, Chennai
ಶಬ್ದಾರ್ಥಗಳು ಅಟ್ಟುಣ್ಣು = ಪಾಕಗೊಳಿಸಿ ಉಪಭೋಗಿಸು, ಅನುಭವಿಸು; ಅರಿವ ಯೋಗಕ್ಕೆ = ಯೋಗವನು ಅರಿತುದಕ್ಕೆ; ಇದು ಚಿಹ್ನ = ಈ ಲಿಂಗಾಂಗ ಸಮರತಿರೂಪ ಅನುಭವವೇ ಚಿಹ್ನೆ; ಉದಕ = ಅನುಭವಾನಂದರಸಜಲ; ಉರಿ = ಜ್ವಲಿಸು, ಕೆರಳು; ಕಪ್ಪೆಯ ಸೋಂಕು = ಕಪ್ಪೆಯನ್ನು ಸ್ಪರ್ಶಿಸು, ದೇಹಗತ ಕರಣಗಳನು ಬಳಸು, ಕರಣಗಳ ಭಾವ ತಾಳು; ಕಲ್ಲ ಬೆದಕು = ಕಲ್ಲುಗಳ ಕೆದಕು, ಕೆದರು; ದೇಹವನ್ನು ಅಲುಗಿಸು, ದೇಹವನ್ನು ಕುರಿತು ಯೋಚಿಸು, ದೇಹದ ಭಾವ ತಾಳು; ಕಲ್ಲ ಹೋರು = ಕಲ್ಲುಗುಣಿ, ದೇಹಾಂತರಂಗ; ಕಲ್ಲು ಕಪ್ಪೆಯೊಳಗಣ ಹ = ದೇಹ, ಕರಣಂಗಳೊಳಗಿನ ವೈಷಯಿಕ ಬಯಕೆ; ಕಾಬಡೆ>ಕಾಣ್ಬಡೆ = ಕಾಣುವುದಾದರೆ, ಕಾಣಬೇಕಾದರೆ; ಕಾರ್ಯ = ಸಾಧ್ಯವಸ್ತು, ಲಿಂಗಾಂಗಸಮರತಿ; ತಿಳಿದು ನೋಡಿರೆ = ಸಾಧಿಸಿ ನೋಡಿರಿ; ನಿಮ್ಮಲ್ಲಿ ನೀವೆ = ನಿಮ್ಮಂತರಂಗದೊಳೆಗೆಯೆ; ಬಲ್ಲಡೆ = ಈ ಯೋಗದ ರೀತಿ-ನೀತಿಗಳನ್ನು ಬಲ್ಲವರಾದರೆ; Written by: Sri Siddeswara Swamiji, Vijayapura