•  
  •  
  •  
  •  
Index   ವಚನ - 570    Search  
 
ಮೇರುಮಂದಿರದಲ್ಲಿ ಈರೈದರತಲೆ, ಧಾರುಣಿಯ ಜನರೆಲ್ಲ ಬಣ್ಣಿಸುತ್ತಿಪ್ಪರು. ಜ್ಞಾನಾಮೃತರಸದಲ್ಲಿ ಓಗರವ ಮಾಡಿ ಆರೋಗಣೆಯ ಮಾಡಿದೆನು. ʼವಿಷಮಾಕ್ಷ ಹರ ಭಸ್ಮವಿಭೂಷಣ ಶಶಿಧರ ಶರಣು ಶರಣೆʼನುತಿದ್ದೆನು. ಇಂದ್ರಾಗ್ನಿಯ ಪುರಪಟ್ಟಣದಲ್ಲಿ ಚಂದ್ರಾಹಾರವ ಬೇಡಿದಡೆ ಖಂಡಕಪಾಲದಲ್ಲಿ ಉಂಡ ತೃಪ್ತಿ, ಅಖಂಡ ನಿರಾಳ ಗುಹೇಶ್ವರ.
Transliteration Mērumandiradalli īraidaratale, dhāruṇiya janarella baṇṇisuttipparu. Jñānāmr̥tarasadalli ōgarava māḍi ārōgaṇeya māḍidenu. ʼviṣamākṣa hara bhasmavibhūṣaṇa śaśidhara śaraṇu śaraṇeʼnutiddenu. Indrāgniya purapaṭṭaṇadalli candrāhārava bēḍidaḍe khaṇḍakapāladalli uṇḍa tr̥pti, akhaṇḍa nirāḷa guhēśvara.
Hindi Translation मेरु मंदिर में दस सिर ; धरती के लोग वर्णन करते हैं। ज्ञानामृत रस में भोजन कर दासोह किया। विषमाक्ष हर भस्म विभूषण शशिधर शरणु शरणु कह रहा था। इंद्राग्नि के पुर में चंद्रहार माँगा तो खंड कपाल में खाने की तृप्ति, अखंडित निराला गुहेश्वरा । Translated by: Eswara Sharma M and Govindarao B N
Tamil Translation மேருமலையிலே பத்துப்புலன்களின் தலை உலக மனிதரனைவரும் மெச்சிக்கொண்டிருப்பர், ஞானஅமுதசாற்றிலே சமைத்துப் படைத்தேன், முக்கண்ணன் சிவன் திருநீறணிந்து சந்திரனைத் தரித்தவன், தஞ்சம் தஞ்சமெனப் பகர்கிறேன். பிரம்மமண்டலத்தில், அமுதச் சாற்றை வேண்டின் உன்மனி நிலையில் உண்ட நிறைவாம் முழுமுதற்பொருளான குஹேசுவரனே! Translated by: Smt. Kalyani Venkataraman, Chennai
ಶಬ್ದಾರ್ಥಗಳು ಆರೋಗಣೆ = ಪ್ರಸಾದ; ಇಂದ್ರಾಗ್ನಿಯ ಪುರ ಪಟ = ಊರ್ಧ್ವಚಕ್ರವೆಂಬ ಜ್ಯೋರ್ತಿಮಯ ಮಂಡಲ, ತ್ರಿಕೂಟದಾಚೆಯ ಬ್ರಹ್ಮಕ್ಷೇತ್ರ; ಈರೈದು = ಐದು ಕರ್ಮೇಂದ್ರಿಯಗಳು, ಐದು ಜ್ಞಾನೇಂದ್ರಿಯಗಳು; ಓಗರ = ಭಕ್ತಿಯೆಂಬ ಪದಾರ್ಥ; ಖಂಡ ಕಪಾಲ = ಉನ್ಮನಿಗೊಂಡ ಮನೋಪಾತ್ರೆ; ಚಂದ್ರಾಹಾರ = ಪರಮಾಮೃತರಸ, ಸಮರಸಾನುಭವದ ಸುಖ; ಜ್ಞಾನಾಮೃತರಸ = ಶಿವಜ್ಞಾನವೆಂಬ ಅಮೃತ; ತಲೆ = ಶಿರಸ್ಸು, ಇಂದ್ರಿಯಂಗಳಿಗೆಲ್ಲ ಶಿರಸ್ಸಿನಂತಿರುವ ಮನಸ್ಸು; ಧಾರುಣಿಯ ಜನರು = ಲೌಕಿಕರು ; ಬಣ್ಣಿಸು = ಮೆಚ್ಚುಗೆ ವ್ಯಕ್ತಪಡಿಸು; ಭಸ್ಮವಿಭೂಷಣ = ಭಸ್ಮಧಾರಿ, ಶುದ್ದ; ಮೇರುಮಂದಿರ = ಸೃಷ್ಟಿಯ ಮೇರುಕೃತಿಯಾದ ದೇಹ; ವಿಷಮಾಕ್ಷ = ತ್ರಿನೇತ್ರ, ಸರ್ವಜ್ಞ; ಶಶಿಧರ = ಚಂದ್ರಮೌಳಿ, ಶಾಂತ; ಹರ = ಶಿವ, ಭವಹರ; Written by: Sri Siddeswara Swamiji, Vijayapura