ಹಸಿವಿಲ್ಲದೆ ಉಣಬಲ್ಲಡೆ,
ಉಪಾಧಿಯಿಲ್ಲದೆ ಬೇಡಬಲ್ಲಡೆ,
ಅದು ವರ್ಮ, ಅದು ಸಂಬಂಧ.
ಗಮನವಿಲ್ಲದೆ ಸುಳಿಯಬಲ್ಲಡೆ, ನಿರ್ಗಮನಿಯಾಗಿ ನಿಲಬಲ್ಲಡೆ
ಅದು ವರ್ಮ, ಅದು ಸಂಬಂಧ.
ಅವರ ನಡೆ ಪಾವನ, ಅವರ ನುಡಿ ತತ್ತ್ವ,
ಅವರ ಜಗದಾರಾಧ್ಯರೆಂಬೆ ಗುಹೇಶ್ವರಾ.
Hindi Translationबिना भूख खा सके तो, बिना उपाधि माँग सके तो,
वह मर्म, वह संबंध।
बिना गमन भटक सके तो निर्गमनी हो कर खडा सके तो
वह मर्म, वह संबंध ।
उनकी चाल पावन, उनकी बोली तत्व
उन्हें जगदाराध्य करूँगा गुहेश्वरा ।
Translated by: Eswara Sharma M and Govindarao B N
English Translation
Tamil Translationபசியின்றி உண்ணவியன்றால், மோகமற்று வேண்டவியன்றால்
அது மர்மம், அது தொடர்பாம்
குறியின்றி நடக்கவியன்றால், நிலைத்து நிற்கவியன்றால்
அது மர்மம், அது தொடர்பாம்
அவர் நடை புனிதம், அவர் சொல் தத்துவம்
அவர், உலகம் வணங்கத்தக்கவர் என்பேன் குஹேசுவரனே
Translated by: Smt. Kalyani Venkataraman, Chennai
Telugu Translation
Urdu Translation
ಸ್ಥಲ -
ಶರಣಸ್ಥಲ
ಶಬ್ದಾರ್ಥಗಳುಉಪಾಧಿ = ಪ್ರಾಪಂಚಿಕವಸ್ತುಗಳು ಹಾಗೂ ಅವುಗಳ ವ್ಯಾಮೋಹ; ಜಗದಾರಾಧ್ಯ = ಎಲ್ಲರಿಗೂ ಪೂಜ್ಯ; ತತ್ತ್ವ = ಜ್ಞಾನಪೂರ್ಣಸತ್ಯವಸ್ತುವಿನ ಅರಿವಿನಿಂದ ಕೂಡಿದುದು; ಪಾವನ = ಪವಿತ್ರಗೊಳಿಸುವಂಥದು; ವರ್ಮ = ಮರ್ಮ; ಸಂಬಂಧ = ಲಿಂಗಾಂಗಸಂಬಂಧ, ಲಿಂಗಾಂಗಸಮರತಿ; Written by: Sri Siddeswara Swamiji, Vijayapura