ನೋಡೂದ ನೋಡಲರಿಯದೆ,
ಕೆಟ್ಟಿತ್ತೀ ಲೋಕವೆಲ್ಲ.
ನೋಡೂದ ನೋಡಬಲ್ಲಡೆ ಕೂಡಲಿಲ್ಲ ಅಗಲಲಿಲ್ಲ.
ನೋಟದ ಕೂಟದ ಅಗಲದ ಸುಖವನು
ಗುಹೇಶ್ವರಾ ನಿಮ್ಮ ಶರಣ ಬಲ್ಲ!
Transliteration Nōḍūda nōḍalariyade,
keṭṭittī lōkavella.
Nōḍūda nōḍaballaḍe kūḍalilla agalalilla.
Nōṭada kūṭada agalada sukhavanu
guhēśvarā nim'ma śaraṇa balla!
Hindi Translation देखना न देखे बिगडा था यह लोक।
देखना देख सके तो मिला नहीं, बिछुड़ा नहीं ।
देखना मिलना बिछुडने का सुख
गुहेश्वरा तुम्हारा शरण जानता।
Translated by: Eswara Sharma M and Govindarao B N
Tamil Translation காணத்தக்கதை காணலறியாது உலகம் கெட்டது,
காணத்தக்கதை காணவியன்றால் கூடவில்லை. அகலவில்லை.
கண்ட, கூடிய அகலாத இன்பத்தை,
குஹேசுவரனே, உம் சரணன் அறிவானன்றோ!
Translated by: Smt. Kalyani Venkataraman, Chennai
ಶಬ್ದಾರ್ಥಗಳು ಕೆಡು = ಬಂಧನಕ್ಕೆ ಸಿಕ್ಕಿಹಾಕಿಕೊಳ್ಳು, ಬದುಕನ್ನು ವ್ಯರ್ಥಮಾಡಿಕೊಳ್ಳು; ನೋಡುವುದು = ಎಲ್ಲವನ್ನು ನೋಡುವಂಥದು ಅಥವಾ ನೋಡಲೇಬೇಕಾದುದು;
Written by: Sri Siddeswara Swamiji, Vijayapura