ಪ್ರಾಣ, ಲಿಂಗದಲ್ಲಿ ಸಮನಿಸದು;
ಲಿಂಗ ಪ್ರಾಣದಲ್ಲಿ ಸಮನಿಸದು.
ಪ್ರಾಣ ಲಿಂಗ, ಲಿಂಗ ಪ್ರಾಣವೆಂಬುದು
ಸಂದು ಸಂಶಯವಲ್ಲದೆ ನಿಜವಲ್ಲ ಕೇಳಾ.
ದಶಪ್ರಾಣವಳಿದು ಲಿಂಗವೆ ತಾನೆಂದರಿಯ ಬಲ್ಲಡೆ
ಅದೇ ಪ್ರಾಣಲಿಂಗ ಗುಹೇಶ್ವರಾ!
Transliteration Prāṇa, liṅgadalli samanisadu;
liṅga prāṇadalli samanisadu.
Prāṇa liṅga, liṅga prāṇavembudu
sandu sanśayavallade nijavalla kēḷā.
Daśaprāṇavaḷidu liṅgave tānendariya ballaḍe
adē prāṇaliṅga guhēśvarā!
Hindi Translation प्राण लिंग में समा नहीं होता,लिंग प्राण में समा नहीं होता।
प्राण लिंग,लिंग प्राण कहना
भिन्न संशय के अलावा निज नहीं सुनो।
दश प्राण नाश होकर लिंग ही खुद जान सके तो,
वहीं प्राणलिंग गुहेश्वरा ।
Translated by: Eswara Sharma M and Govindarao B N
Tamil Translation பிராணன் இலிங்கத்திலிணையாது, இலிங்கம் பிராணனிலிணையாது
பிராணன் இலிங்கம், இலிங்கம் பிராணனென்பது
பேதம்சார்ந்த சந்தேகமன்றி உண்மையன்று,
பத்துவாயு அடங்கி, இலிங்கமே தானென உணரவியன்றால்
அதுவே பிராணலிங்கமாம் குஹேசுவரனே.
Translated by: Smt. Kalyani Venkataraman, Chennai
ಶಬ್ದಾರ್ಥಗಳು ಅಳಿ = ಅಡಗು; ದಶಪ್ರಾಣ = ಪ್ರಾಣ, ಅಪಾನ, ವ್ಯಾನ, ಉದಾನ, ಸಮಾನ, ನಾಗ, ಕೂರ್ಮ, ಕೃಕರ, ದೇವದತ್ತ, ಧನಂಜಯ-ಹೀಗೆ ಹತ್ತು ವಿಧವಾದ ಪ್ರಾಣಶಕ್ತಿ; ಸಂದು = ಭಿನ್ನತೆ; ಸಂಶಯ = ಅನಿಶ್ಚಿತತೆ; ಸಮನಿಸು = ಬೆರೆತುಹೋಗು;
Written by: Sri Siddeswara Swamiji, Vijayapura