ಇದ್ದುದ ಹೇಳಲಿಲ್ಲ, ಇದ್ದುದ ತೋರಲಿಲ್ಲ,
ಹೊದ್ದಿದ ಆಶ್ರಮವ ನಾನೇನೆಂಬೆನು ಶಿವನೆ?
ಭದ್ರಕಾಳಿಯ ಬಸಿರೊಳಗಿರ್ದ ಬಾವಿಯ ಸರ್ಪನು,
ಸಿದ್ಧರಸದ ಘುಟಿಕೆಯ ನುಂಗಿ ಎದ್ದು ಆಡಿತ್ತು ನೋಡಾ!
ಹದ್ದಿನ ಹೆಡೆಯಲ್ಲಿ ಮಾಣಿಕವಿದ್ದುದು
ಇಲ್ಲೆಂಬ ಎದ್ದು ಹೇಳುವ ಕನಸು ತಾನಿಲ್ಲ ಗುಹೇಶ್ವರ.
Transliteration Idduda hēḷalilla, idduda tōralilla,
hoddida āśramava nānēnembenu śivane?
Bhadrakāḷiya basiroḷagirda bāviya sarpanu,
sid'dharasada ghuṭikeya nuṅgi eddu āḍittu nōḍā!
Haddina heḍeyalli māṇikaviddudu
illemba eddu hēḷuva kanasu tānilla guhēśvara.
Hindi Translation जो रहा उसे नहीं कहा, जो रहा उसे नहीं दिखाया ;
पाया आश्रम को मैं क्या कहूँ हे शिव ?
भद्रकाली गर्भ में रहा कुए का साँप
सिद्ध रस की घूँट पीकर उठ चलता था।
गीध के फन में माणिक रहा
न रहा उठ कहने का सपना नहीं गुहेश्वरा।
Translated by: Eswara Sharma M and Govindarao B N
Tamil Translation இருந்ததைக் கூறவில்லை. இருந்ததைக் காட்டவில்லை!
பெற்ற அனுபவத்தை நான் என்னென்பேன் சிவனே?
பத்திரகாளியின் உடலிலிருந்த வாவியில் பாம்பு
அமுதபிந்துவைச் சுவைத்து எழுந்து ஆடுவதைக் காணாய்!
விரித்த படத்தில் மாணிக்கமிருந்தது. விழித்து
இல்லை எனக்கூறும் கனவன்று குஹேசுவரனே.
Translated by: Smt. Kalyani Venkataraman, Chennai
ಶಬ್ದಾರ್ಥಗಳು ಆಡು = ಓಲಾಡು; ಆಶ್ರಮ = ಲಿಂಗಸಮರಸಸ್ಥಿತಿ, ಅನುಭಾವದ ನೆಲೆ; ಇದ್ದುದು = ಅನುಭವಕ್ಕೆ ಬಂದುದು; ಏಳು = ಎಚ್ಚರಾಗು, ಊರ್ಧ್ವಮುಖಗೊಳ್ಳು; ತೋರು = ಕಾಣಿಸಿಕೊಡು; ನುಂಗು = ಸವಿ; ಬಸಿರು = ದೇಹ; ಬಾವಿ = ದೇಹಾಂತರಂಗ; ಭದ್ರಕಾಳಿ = ಪ್ರಕೃತಿ; ಮಾಣಿಕ = ಜ್ಯೋತಿರ್ಲಿಂಗ, ಜ್ಞಾನಸ್ವರೂಪಿಯಾದ ಆತ್ಮ; ಸರ್ಪ = ಕುಂಡಲಿನಿಶಕ್ತಿ, ಪ್ರಾಣಶಕ್ತಿ, ಪ್ರಜ್ಞಾಶಕ್ತಿ; ಸಿದ್ದರಸದ ಘುಟಿಕೆ = ಅಮೃತಬಿಂದು; ಹದ್ದು = ಸುಷುಮ್ನೆಯ ತುಟ್ಟತುದಿ, ಸ್ವಾನಂದಿಯಾದ ಶರಣ ವಿಹರಿಸುವ-ವಿರಮಿಸುವ ತಾಣ; ಹೆಡೆ = ಆ ತಾಣವನ್ನು ಸೇರಿದ ಕುಂಡಲಿನಿಶಕ್ತಿಯ ಶಿರಸ್ಸು, ಉನ್ಮನಿ; ಹೇಳು = ವಿವರಿಸು; ಹೊದ್ದು = ಪಡೆ;
Written by: Sri Siddeswara Swamiji, Vijayapura