Index   ವಚನ - 598    Search  
 
ಅಂಗೈಯೊಳಗಣ ಸಿಂಹಾಸನವಿದೇನೊ? ಅಂಗೈಯ ಮೇಲೆ ಸಿಂಹಾಸನವೆಂದೇನೊ? ಧೂಪ ದೀಪ ನಿವಾಳಿಯೆಂದೇನೊ? ಶರಣಂಗೆ ಕಳಸದ ಮೇಲೆ ನೆಲೆಗಟ್ಟೆಯೆಂಬುದೇನೊ? ಗುಹೇಶ್ವರನೆಂಬ ನಿರಾಳ!