•  
  •  
  •  
  •  
Index   ವಚನ - 600    Search  
 
ಅರಿದೆಹೆ ಅರಿದೆಹೆನೆಂದಡೆ ಅದೇಕೊ ಮುಂದೆ ಮರವೆ? ನೀನರಿದೆನೆಂಬುದು ನಿನ್ನಲ್ಲಿ ಲೇಸಾಗಿ ಉಳ್ಳಡೆ, ನಿನ್ನರಿವೆಲ್ಲವ ಹರಿಹಂಚ ಮಾಡಿ ಹೋದಡರಿ ಮರುಳೆ! ಸ್ವತಂತ್ರ ಘನದೊಳಗಿರ್ದು, ನಿಜವನರಿದಿಹೆನೆಂದಡೆ ಮೂರ್ತಿ ಕಿರಿದಲ್ಲ, ನಿಲ್ಲು ಮಾಣು. ಗುಹೇಶ್ವರನೆಂಬ ಲಿಂಗದ ಘನಘಟ್ಟಿಯನರಿವಡೆ ನಿನ್ನರಿವೆಲ್ಲವ ಬಚ್ಚಬರಿಯ ಬಯಲೆಂದರಿಯಾ ನೀನು, ಅನುಭಾವಿಯಾದಡೆ.
Transliteration Aridehe aridehenendaḍe adēko munde marave? Nīnaridenembudu ninnalli lēsāgi uḷḷaḍe, ninnarivellava harihan̄ca māḍi hōdaḍari maruḷe! Svatantra ghanadoḷagirdu, nijavanaridihenendaḍe mūrti kiridalla, nillu māṇu. Guhēśvaranemba liṅgada ghanaghaṭṭiyanarivaḍe ninnarivellava baccabariya bayalendariyā nīnu, anubhāviyādaḍe.
Hindi Translation जान लिया जान लिया कहें तो आगे अज्ञान क्यों? तुमने जान लिया भाव रहे तो, तुम्हारा सारा ज्ञान फोड फोडकर बाँटो पागल स्वतंत्र घन में रहकर सत्य जान लिया कहें तो मूर्ति छोटी नहीं, रुक, मत ! गुहेश्वर कहना लिंग की घन महिमा जान सके तो तुम्हारा सारा ज्ञान फोड फोडकर बाँटकर तुम जानो पागल, अनुभावी हो तो । Translated by: Eswara Sharma M and Govindarao B N
Tamil Translation அறிந்தே னறிந்தே னெனின் பிறகு மறதி எதற்கோ? நீ அறிந்தாயென்பது உன்னிடம் நிலைபெற்றுள்ளது எனின் உன் அறிவனைத்தையும் நொறுக்கி விடுவாய் மருளே! முழுமுதற் பொருளிலே நீ இருந்து கொண்டு அறிந்தேனெனின் வடிவம் சிறிதன்று, நில், நில் குஹேசுவரன் எனும் இலிங்க ஞானத்தை உணர்ந்தால் உன்னறிவு அனைத்தையும் நொறுக்கி உணர்ந்திருந்தால் நீ அறிவாய் மருளே Translated by: Smt. Kalyani Venkataraman, Chennai
ಶಬ್ದಾರ್ಥಗಳು ಅರಿದೆಹೆನ್ = ಅರಿತಿದ್ದೇನೆ; ಅರಿವು = ಭಿನ್ನಜ್ಞಾನ, ಮರೆವು; ಘನ = ಅಭೇದ್ಯ, ಪರಿಪೂರ್ಣ, ಅಖಂಡ; ಘನಘಟ್ಟಿ = ಕೇವಲ ಅರಿವಿನ ಘನ; ಮರವೆ = ಭೇದಜ್ಞಾನ, ಅಜ್ಞಾನ; ಸ್ವತಂತ್ರ = ಪ್ರಾಕೃತಿಕ ವಸ್ತುತಂತ್ರಕ್ಕೆ ಒಳಗಾಗದ, ಕಾಲ-ದೇಶಾದಿಗಳ ಪರಿಮಿತಿಗೆ ಸಿಲುಕದ, ನಿರಾಲಂಬವಾದ; ಹರಿಹಂಚು ಮಾಡು = ಚೆಲ್ಲಿಬಿಡು, ನಾಶಗೊಳಿಸು; Written by: Sri Siddeswara Swamiji, Vijayapura