•  
  •  
  •  
  •  
Index   ವಚನ - 606    Search  
 
ಸತ್ತು ಹುಟ್ಟಿ ಕೆಟ್ಟವರೆಲ್ಲರು, ದೇವಲೋಕಕ್ಕೆ ಹೋದರೆಂಬ ಬಾಲಭಾಷೆಯ ಕೇಳಲಾಗದು. ಸಾಯದ ಮುನ್ನ ಸ್ವಯವನರಿದಡೆ ದೇವನೊಲಿವ ನಮ್ಮ ಗುಹೇಶ್ವರನು.
Transliteration Sattu huṭṭi keṭṭavarellaru, dēvalōkakke hōdaremba bālabhāṣeya kēḷalāgadu. Sāyada munna svayavanaridaḍe dēvanoliva nam'ma guhēśvaranu.
Hindi Translation मरा, पैदा, बिगडे सब देवलोक गये कहना बालभाषा न सुनना । मरने के पहले खुद को जाने तो हमारा गुहेश्वर देव अनुग्रह करेगा। Translated by: Eswara Sharma M and Govindarao B N
Tamil Translation மாண்டு, பிறந்து கெட்ட அனைவரும் தேவருலகிற்குச் சென்றனரெனும் சிறுபிள்ளைத்தன பேச்சைக் கேட்கலாகாது, மடிவதற்கு முன்பு தன்னையறியின் இறைவனருள்வான் நம் குஹேசுவரன். Translated by: Smt. Kalyani Venkataraman, Chennai
ಶಬ್ದಾರ್ಥಗಳು ಅರಿ = ನಿಜಸ್ವರೂಪವನ್ನು ತಿಳಿದುಕೊಳ್ಳು; ಒಲಿ = ಅನುಗ್ರಹಿಸು, ಸಾಮರಸ್ಯವನ್ನು ಕರುಣಿಸು; ಕೆಡು = ದುಃಖಿಯಾಗು, ಸಾಯು; ಬಾಲಭಾಷೆ = ಅರಿಯದವರ ಮಾತು; ಸಾಯದ ಮುನ್ನ = ಬದುಕಿರುವಾಗಲೆ; ಸ್ವಯ = ಆತ್ಮ-ಪರಮಾತ್ಮ; Written by: Sri Siddeswara Swamiji, Vijayapura