•  
  •  
  •  
  •  
Index   ವಚನ - 607    Search  
 
ಕೋಣನನೂ ಕುದುರೆಯನೂ, ಹಾವನೂ ಹದ್ದನೂ; ಮೊಲನನೂ ನಾಯನೂ, ಇಲಿಯನೂ ಬೆಕ್ಕನೂ, ಹುಲಿಯನೂ ಹುಲ್ಲೆಯನೂ ಮೇಳೈಸುವಂತೆ ಮೇಳವಿಲ್ಲದವನ ಒಕ್ಕತನ, ಆಳಿಯ ಬಾಳುವೆ, ಕಾಡಬೆಕ್ಕಿಂಗೆ ತುಯ್ಯಲನಿಕ್ಕುವಂತೆ! ಕೇಳು ಗುಹೇಶ್ವರಾ ನಿರಾಳ ಬೋಳಿಂಗೆ ತೊಂಡಿಲ ಮುಡಿಸುವಂತೆ.
Transliteration Kōṇananū kudureyanū, hāvanū haddanū; molananū nāyanū, iliyanū bekkanū, huliyanū hulleyanū mēḷaisuvante mēḷavilladavana okkatana, āḷiya bāḷuve, kāḍabekkiṅge tuyyalanikkuvante! Kēḷu guhēśvarā nirāḷa bōḷiṅge toṇḍila muḍisuvante.
Hindi Translation भैंसा,घोडा,सर्प,गीध, खरगोश, कुत्ता, चूहा, बिल्ली, बाघ,हिरन, इन्हें इकट्टा करने जैसे ! बिना मेल सहजीवन निकृष्ट जीवन, जंगली बिल्ली को क्षीरान्न रखे जैसे सुनो। गुहेश्वर निराला,खल्वाट को फूल पहने जैसे। Translated by: Eswara Sharma M and Govindarao B N
Tamil Translation எருமையை - குதிரையை, பாம்பை - கீரியை, முயலை - நாயை எலியைப் - பூனையை புலியை - மானை இணைப்பதைப் போன்றதாம்! மாறுபட்ட பக்தியை உடையவனின் வாழ்வு. உறுதியற்ற மனத்தை உடைய பக்தனின் வாழ்வு காட்டுப் பூனைக்குப் பால்சோற்றை அளிப்பதனையதாம். மழித்ததலையில் பூச்சரத்தைச் சூட்டுவதனையதாம் தூயவன், கேளாய் குஹேசுவரனே. Translated by: Smt. Kalyani Venkataraman, Chennai
ಶಬ್ದಾರ್ಥಗಳು ಆಳಿ = ಅಳಿಮನದ ಭಕ್ತ; ಒಗತನ = ಸಹಜೀವನ; ತುಯ್ಯಲು = ಕ್ಷೀರಾನ್ನ; ತೊಂಡಿಲು = ಹೂದಂಡೆ; ನಿರಾಳ = ನಿರ್ಮಲ, ಬರಿ ಬಯಲು, ಸುಶಾಂತ; ಮೇಳವಿಲ್ಲದವನು = ಭಿನ್ನಭಕ್ತಿಯವನು, ಅಳಿಮನದ ಭಕ್ತನು; ಮೇಳವಿಸು = ಜೊತೆಗೂಡಿಸು; Written by: Sri Siddeswara Swamiji, Vijayapura