ಜ್ಯೋತಿಯೊಳಗಣ ಕರ್ಪುರಕ್ಕೆ, ಅಪ್ಪುವಿನ ಕೈಯಲಿಪ್ಪ ಉಪ್ಪಿಂಗೆ,
ಶ್ರೀಗುರುವಿನ ಹಸ್ತದೊಳಗಿಪ್ಪ ಶಿಷ್ಯಂಗೆ-ಈ ಮೂರಕ್ಕೆಯೂ
ಬೇರೆ ಕ್ರಿಯಾವರ್ತನೆಯುಂಟೆ ಗುಹೇಶ್ವರಾ?
Transliteration Jyōtiyoḷagaṇa karpurakke, appuvina kaiyalippa uppiṅge,
śrīguruvina hastadoḷagippa śiṣyaṅge-ī mūrakkeyū
bēre kriyāvartaneyuṇṭe guhēśvarā?
English Translation 2 There is not One and Other,
Nor This and That,
When camphor joins with fire,
Or salt with water;
Nor yet when Master joins
With his disciple,
O Guhévara!
Hindi Translation ज्योति से मिले कपूर, जल से मिले लवण
श्रीगुरु की कृपादृष्टि में रहे शिष्य
इन तीनों को प्रत्येक प्रत्येक अस्तित्व है क्या गुहेश्वरा ?
Translated by: Eswara Sharma M and Govindarao B N
Tamil Translation சுடரிலுள்ள கற்பூரத்திற்கு, நீரிலுள்ள உப்பிற்கு,
ஸ்ரீகுருவின் திருக்கரத்திலுள்ள சீடனுக்கு
இம்மூவருக்கும் தனிப்பட்ட இருப்பு உளதோ குஹேசுவரனே?
Translated by: Smt. Kalyani Venkataraman, Chennai
ಶಬ್ದಾರ್ಥಗಳು ಕ್ರಿಯಾವರ್ತನೆ = ಸ್ವತಂತ್ರವಾದ ಮತ್ತು ಭಿನ್ನವಾದ ಅಸ್ತಿತ್ವ.; ಶ್ರೀಗುರುವಿನ ಹಸ್ತದೊ = ಶ್ರೀ ಗುರುವಿನ ಚರಣಗಳಲ್ಲಿ ತನ್ನನ್ನು ಸಂಪೂರ್ಣ ಸಮರ್ಪಿಸಿಕೊಂಡು ಅವನ ಅನುಗ್ರಹಕ್ಕೆ ಪಾತ್ರನಾದ ಶಿಷ್ಯ.;
Written by: Sri Siddeswara Swamiji, Vijayapura