Index   ವಚನ - 621    Search  
 
ಪೃಥ್ವಿಯೊಳಗಿಲ್ಲ, ಆಕಾಶದೊಳಗಿಲ್ಲ, ಚತುರ್ದಶ ಭುವನಾದಿ ಭುವನಂಗಳೊಳಗೆಯೂ ಇಲ್ಲ. ಹೊರಗೆಯೂ ಇಲ್ಲ ಏನಾಯಿತ್ತೆಂದರಿಯೆನಯ್ಯಾ. ಎಂತಾಯಿತ್ತೆಂದರಿಯೆನಯ್ಯಾ ಗುಹೇಶ್ವರ ಅಂದೂ ಇಲ್ಲ, ಇಂದೂ ಇಲ್ಲ ಎಂದೂ ಇಲ್ಲ.