•  
  •  
  •  
  •  
Index   ವಚನ - 620    Search  
 
ಸ್ಥೂಲವನು ಬ್ರಹ್ಮನಳವಡಿಸಿಕೊಂಡ. ಸೂಕ್ಷ್ಮವ ವಿಷ್ಣುವಳವಡಿಸಿಕೊಂಡ. ಕಾರಣವ ರುದ್ರನಳವಡಿಸಿಕೊಂಡ. ನಿಃಕಾಯವ ಈಶ್ವರನಳವಡಿಸಿಕೊಂಡ. ನಿರಂಜನವ ಸದಾಶಿವನಳವಡಿಸಿಕೊಂಡ. ನಿರವಯವ ವ್ಯೋಮಾತೀತನಳವಡಿಸಿಕೊಂಡ. ಈ ಷಡುಸ್ಥಲದವರೆಲ್ಲ ಬಯಲನಳವಡಿಸಿಕೊಂಡು ಬಯಲಾಗಿ ಹೋದರು ಕಾಣಾ ಗುಹೇಶ್ವರಾ. ನಿಮ್ಮ ಶರಣ ನಿಜಲಿಂಗಾಂಗವಾಗಿರ್ದನು.
Transliteration Sthūlavanu brahmanaḷavaḍisikoṇḍa. Sūkṣmava viṣṇuvaḷavaḍisikoṇḍa. Kāraṇava rudranaḷavaḍisikoṇḍa. Niḥkāyava īśvaranaḷavaḍisikoṇḍa. Niran̄janava sadāśivanaḷavaḍisikoṇḍa. Niravayava vyōmātītanaḷavaḍisikoṇḍa. Ī ṣaḍusthaladavarella bayalanaḷavaḍisikoṇḍu bayalāgi hōdaru kāṇā guhēśvarā. Nim'ma śaraṇa nijaliṅgāṅgavāgirdanu.
Hindi Translation स्थूल को ब्रह्म ने अपनाया। सूक्ष्म को विष्णु ने अपनाया। कारण को रुद्र ने अपनाया। निःकाय को ईश्वर ने अपनाया। निरंजन को सदाशिव ने अपनाया। निरवय को व्योमातीत ने अपनाया। इन षड्‌स्थली शून्य को अपनाकर शून्य में समा गये देखो गुहेश्वरा। Translated by: Eswara Sharma M and Govindarao B N
Tamil Translation தூலத்தில் பிரம்மன் நிறைந்தனன், சூட்சுமத்தில் விஷ்ணு நிறைந்தனன், காரணத்தில் உருத்திரன் நிறைந்தனன், நிகாய உடலில் ஈசுவரன் நிறைந்தனன், நிரஞ்ஜன உடலில் சதாசிவன் நிறைந்தனன், வடிவமற்ற உடலில் மஹேசன் நிறைந்தனன், ஆறுதலத்தினரனைவரும் வயலிலே நிறைந்து வயலாயினர் காணாய் குஹேசுவரனே. Translated by: Smt. Kalyani Venkataraman, Chennai
ಶಬ್ದಾರ್ಥಗಳು ಅಳವಡಿಸಿಕೊಳ್ಳು = ವ್ಯಾಪಿಸು, ಸಮಾವಿಷ್ಟಗೊಳಿಸಿಕೊಳ್ಳು, ಅಡಗಿಸಿಕೊಳ್ಳು; ಈಶ್ವರ = ಆದಿಶಕ್ತಿಯಲ್ಲಿ ಅಭಿವ್ಯಕ್ತವಾದ ಪರಶಿವನ ಕಳೆ; ಕಾರಣ = ಅಜ್ಞಾನ ಹಾಗೂ ಸುಖಾನುಭವಗಳಿಂದ ಕೂಡಿದ ದೇಹ; ನಿಃಕಾಯ = ಊರ್ಧ್ವಮುಖಗೊಂಡ ಚಿತ್ತು ಎಂಬ ದೇಹ; ನಿರವಯವ = ಧ್ಯೇಯಲಿಂಗದಲ್ಲಿ ಸಮರಸಗೊಂಡ ಚಿತ್ತು ಎಂಬ ದೇಹ; ಬಯಲನಳವಡಿಸಿಕೊಳ್ಳು = ಬಯಲಲ್ಲಿ ಬೆರೆತುಹೋಗು; ಬ್ರಹ್ಮ = ಕ್ರಿಯಾಶಕ್ತಿಯೊಳು ಅಭಿವ್ಯಕ್ತವಾದ ಪರಶಿವನ ಕಳೆ; ಮಹೇಶ = ಚಿಚ್ಛಕ್ತಿಯಲ್ಲಿ ಅಭಿವ್ಯಕ್ತವಾದ ಪರಶಿವನ ಕಳೆ; ರುದ್ರ = ಇಚ್ಚಾಶಕ್ತಿಯಲ್ಲಿ ಅಭಿವ್ಯಕ್ತವಾದ ಪರಶಿವನ ಕಳೆ; ಷಡುಸ್ಥಲದವರು = ಬ್ರಹ್ಮಾದಿ ಷಟ್ ದೇವತೆಗಳು; ಸದಾಶಿವ = ಪರಾಶಕ್ತಿಯಲ್ಲಿ ಅಭಿವ್ಯಕ್ತವಾದ ಪರಶಿವನ ಕಳೆ; ಸೂಕ್ಷ್ಮ = ಸಂಕಲ್ಪ-ವಿಕಲ್ಪಾತ್ಮಕವಾದ ದೇಹ; ಸ್ಥೂಲ = ಹಸ್ತ-ಪಾದಾದಿಗಳಿಂದ ಯುಕ್ತವಾದ ದೇಹ; Written by: Sri Siddeswara Swamiji, Vijayapura