•  
  •  
  •  
  •  
Index   ವಚನ - 635    Search  
 
ಅರಿದು ನೆನೆಯಲಿಲ್ಲ, ಮರೆದು ಪೂಜಿಸಲಿಲ್ಲ. ತೆರಹಿಲ್ಲದ ಘನಕ್ಕೆ ಕುರುಹು ಮುನ್ನಿಲ್ಲ. ತನಗೆ ಗುರುವಿಲ್ಲ, ಗುರುವಿಗೆ ತಾನಿಲ್ಲ ಗುರುವಿಗೆ ಶಿಷ್ಯನು ಹೊಡವಡುವ ಕಾರಣ ಮುನ್ನಿಲ್ಲ. ಬಯಲ ಬಿತ್ತಲಿಲ್ಲ, ಬೆಳೆಯಲಿಲ್ಲ, ಒಕ್ಕಲಿಲ್ಲ, ತೂರಲಿಲ್ಲ, ಗುಹೇಶ್ವರನೆಂಬ ಲಿಂಗಕ್ಕೆ ಕುರುಹು ಮುನ್ನಿಲ್ಲ!
Transliteration Aridu neneyalilla, maredu pūjisalilla. Terahillada ghanakke kuruhu munnilla. Tanage guruvilla, guruvige tānilla guruvige śiṣyanu hoḍavaḍuva kāraṇa munnilla. Bayala bittalilla, beḷeyalilla, okkalilla, tūralilla, guhēśvaranemba liṅgakke kuruhu munnilla!
Hindi Translation जानकर याद नहीं की, भूलकर पूजा नहीं की। बिना अवकाश घन को चिह्न पहले ही नहीं। अपने को गुरु नही; गुरु को मैं नहीं। गुरु को प्रणाम करनेवाला शिष्य पहले ही नहीं। शून्य बोया नहीं, पैदा नहीं, स्वच्छ नहीं किया, नहीं पछोरना। गुहेश्वर कहने लिंग को चिह्न पहले ही नहीं। Translated by: Eswara Sharma M and Govindarao B N
Tamil Translation அறிந்து நினையவில்லை. மறந்து பூஜிக்கவில்லை வாய்ப்பற்ற பரத்திற்கு பெயர், வரையறை என்றுமிலை தனக்குக் குருவில்லை. குருவிற்குத் தானில்லை குருவைச் சீடன் வணங்கும் காரணம் என்றுமிலை. வயலில் விதைக்கவில்லை. விளையவில்லை சேகரிக்கவில்லை. தூற்றவில்லை குஹேசுவரலிங்கத்திற்கு சின்னம் என்றுமில்லை. Translated by: Smt. Kalyani Venkataraman, Chennai
ಶಬ್ದಾರ್ಥಗಳು ಅರಿ = ಚಿನ್ಮಯಲಿಂಗವೇ ತಾನು-ಎಂದು ಅನುಭವತಹ ತಿಳಿ; ಕುರುಹು = ನಾಮ-ಸೀಮೆ; ಕುರುಹು = ಚಿಹ್ನೆ; ಘನ = ಪರಿಪೂರ್ಣಲಿಂಗ ; ತೆರಹು = ಅವಕಾಶ; ಮರೆ = ಲಿಂಗವು ಬೇರೆ, ತಾನು ಬೇರೆ-ಎಂಬುದನ್ನು ಮರೆ; ಮುನ್ನ = ಎಂದೆಂದಿಗೂ; ಹೊಡವಡು = ವಂದಿಸು; Written by: Sri Siddeswara Swamiji, Vijayapura