ಭವಿಯ ಕಳೆದೆಹೆವೆಂಬ ಅಪ್ರಮಾಣಿಗಳು ನೀವು ಕೇಳಿರೆ,
ಭವಿಯ ಕಳೆದೆಹೆವೆಂಬ ಭವಭಾರಿಗಳು ನೀವು ಕೇಳಿರೆ;
ಭವಿಗೆ ಕೊಡಲಾಗದೆಂಬ ಭಕ್ತನ ನುಡಿಯ ಕೇಳಲಾಗದು.
ನಾನು ಭವಿವಿಡಿದು ಭಕ್ತಿಯಿಂದ ಸುಖಿಯಾದೆ ಗುಹೇಶ್ವರಾ.
Transliteration Bhaviya kaḷedehevemba apramāṇigaḷu nīvu kēḷire,
bhaviya kaḷedehevemba bhavabhārigaḷu nīvu kēḷire;
bhavige koḍalāgademba bhaktana nuḍiya kēḷalāgadu.
Nānu bhaviviḍidu bhaktiyinda sukhiyāde guhēśvarā.
Hindi Translation भवि को दूर किया कहनेवाले अप्रमाणिक तुम सुनो,
भवि को दूर किया कहनेवाले भवभारी तुम सुनो :
भवि को न दिया कहनेवाले भक्त की बात न सुनना।
मैं भवि पकडकर भक्ति से सुखी बना गुहेश्वरा !
Translated by: Eswara Sharma M and Govindarao B N
Tamil Translation சிவநெறியிலியைத் துறந்தோமெனும்
உண்மையற்றோரே, நீவிர் கேண்மின்,
சிவநெறியிலியைத் துறந்தோமெனும் பிறவிப்
பிணைப்பிலுள்ளோரே, நீவிர் கேண்மின்,
சிவநெறியிலிக்கு ஈயலாகாதெனும் பக்தனின்
சொல்லைக் கேட்கலாகாது. நான் பரமனைப் பிடித்து
பக்தியினால் இன்புற்றேன் குஹேசுவரனே.
Translated by: Smt. Kalyani Venkataraman, Chennai
ಶಬ್ದಾರ್ಥಗಳು ಅಪ್ರಮಾಣಿಗಳು = ಅಸತ್ಯವಾದಿಗಳು; ಕಳೆ = ದೂರವಿಡು; ಭವಭಾರಿಗಳು = ಭವದಲ್ಲಿ ಬದ್ದರಾದವರು; ಭವಿ = ಧರ್ಮಪಥವಿಡಿಯದವ, ಧರ್ಮಲಾಂಛನವಿಲ್ಲದವ; ಭವಿ = ಸದಾ ಇರುವ ತತ್ವ್ತ, ಚಿರಂತನ ಸತ್ಯ, ಪರಮಾತ್ಮ; ಹಿಡಿ = ನಿರಮಲಾಂತಃಕರಣದಲ್ಲಿ ಧರಿಸು, ಅವನೇ ತಾನು ಎಂದು ಅನುಸಂಧಾನಿಸು;
Written by: Sri Siddeswara Swamiji, Vijayapura