ಯುಗಜುಗ ಮಡಿವಲ್ಲಿ ಬ್ರಹ್ಮಾಂಡಗಳಳಿವಲ್ಲಿ
ಲಿಂಗವೆಂದರಿತವರಾರೊ?
ಶಿವ ಶಿವಾ ವಾಯದಲೊದಗಿದ ಮಾಯಾವಾದಿಗಳು!
ದೇವನೆಂದರಿತವರಾರೊ?
ಶಿವ ಶಿವಾ ಅಗ್ನಿ ತೃಣದೊಳಗಡಗಿ ಲೀಯವಾದುದ
ಗುಹೇಶ್ವರಾ ನಿಮ್ಮ ಶರಣ ಬಲ್ಲ!
Hindi Translationयुग जुग मरते वक्त ब्रम्हांड नाश होते समय
लिंग का ज्ञान कौन जाने ?
शिवशिवा ! माया में मिले मायावादी ।
देव का ज्ञान कौन जाने ?
शिवशिवा!अग्नि तृण में छिपकर एक होने का
गुहेश्वरा, तुम्हारा शरण जाना ।
Translated by: Eswara Sharma M and Govindarao B N
English Translation
Tamil Translationயுகங்களின் அழிவிலே, பேரண்டங்களின் அழிவிலே,
இலிங்கத்தை அறிந்தவர் யார்?
சிவசிவா மாயத்தில் நிலைத்துள்ள மாயாவாதிகள்
இறையென்று அறிந்தவர் யார்?
சிவசிவா, அழல், புல்லிலடங்கி இணைந்ததை
குஹேசுவரனே, உம் சரணன் அறிவான்.
Translated by: Smt. Kalyani Venkataraman, Chennai
Telugu Translation
Urdu Translation
ಸ್ಥಲ -
ಐಕ್ಯಸ್ಥಲ
ಶಬ್ದಾರ್ಥಗಳುಅಗ್ನಿ = ಅಗ್ನಿತತ್ವ್ತ; ಅಡಗು = ಕಾಣದಂತೆ ನೆಲೆಸು; ಮಡಿ = ಸರಿದು ಹೋಗು, ಇಲ್ಲದಾಗು; ಮಾಯಾವಾದಿಗಳು = ಆ ಹುಸಿಯಾದ ದೇಹವೇ ತಾವು ಎಂದು ಅಭಿಮಾನಿಸುವವರು.; ಯುಗಜುಗ = ಯುಗಯುಗ, ಲಕ್ಷ ಲಕ್ಷ ವರ್ಷಗಳ ಕಾಲಖಂಡ; ಲೀಯವಾಗು = ಒಂದಾಗಿರು, ಬೇರಾಗಿ ತೋರದಿರು; ವಾಯದಲಿ ಒದಗು = ನಶ್ವರವಾದ ದೇಹದಲ್ಲಿ ನೆಲೆಸು; Written by: Sri Siddeswara Swamiji, Vijayapura