ಹಿಂದೆ ಎಷ್ಟು ಪ್ರಳಯ ಹೋಯಿತ್ತೆಂದರಿಯೆ?
ಮುಂದೆ ಎಷ್ಟು ಪ್ರಳಯ ಬಂದಹುದೆಂದರಿಯೆ?
ತನ್ನ ಸ್ಥಿತಿಯ ತಾನರಿಯದಡೆ ಅದೇ ಪ್ರಳಯವಲ್ಲಾ!
ತನ್ನ ವಚನ ತನಗೆ ಹಗೆಯಾದಡೆ ಅದೇ ಪ್ರಳಯವಲ್ಲಾ!
ಇಂತಹ ಪ್ರಳಯ ನಿನ್ನಲುಂಟೆ ಗುಹೇಶ್ವರಾ?
Hindi Translationपहले कितने प्रलय हुए थे नहीं जानता।
आगे कितने प्रलय होंगे नहीं जानता।
अपनी स्थिति खुद न जाने तो वहीं प्रलय !
अपनी बोली खुद शत्रु हो तो वहीं प्रलय !
ऐसे प्रलय तुममें हैं क्या गुहेश्वरा?
Translated by: Eswara Sharma M and Govindarao B N
English Translation
Tamil Translationமுன்பு எத்தன பிரளயம் அகன்ற தென்றறியேன்,
இன்னும் எத்தனை பிரளயம் ஏற்படுமென்பதை யறியேன்,
தன் நிலையைத் தான் அறியவில்லைஎனின் அதே பிரளயமாம்.
தன்சொல் தனக்குப் பகையாயின் அதே பிரளயமாம்,
இத்தகைய பிரளயம் உன்னிடமுளதோ குஹேசுவரனே.
Translated by: Smt. Kalyani Venkataraman, Chennai
Telugu Translation
Urdu Translation
ಸ್ಥಲ -
ಐಕ್ಯಸ್ಥಲ
ಶಬ್ದಾರ್ಥಗಳುಅರಿ = ಸಾಕ್ಷಾತ್ಕರಿಸಿಕೊಳ್ಳು; ತನ್ನ ವಚನ = ತನ್ನ ನಿಜಸ್ವರೂಪವನ್ನು ತಾನು ತಿಳಿಯಬೇಕು ಎಂಬ ಪವಿತ್ರ ನುಡಿ; ತನ್ನ ಸ್ಥಿತಿ = ತನ್ನ ನಿಜವಾದ ಜ್ಞಾನಘನಸ್ವರೂಪ; ಪ್ರಳಯ = ಅಡಗಿಹೋಗುವಿಕೆ, ವ್ಯಕ್ತಿಯ ವಿಷಯದಲ್ಲಿ ಇದು ಮರಣ, ವಿಶ್ವದ ವಿಷಯದಲ್ಲಿ ಇದು ಮಹಾಲಯ; ಪ್ರಳಯವಲ್ಲಾ = ಪ್ರಳಯವಲ್ಲವೇನು?; ಹಗೆಯಾಗು = ಅಂಗವಿಸದಿರು, ಅಳವಡದಿರು, ವಿರೋಧವಾಗು; ಹೋಗು = ಆಗಿಹೋಗು; Written by: Sri Siddeswara Swamiji, Vijayapura