•  
  •  
  •  
  •  
Index   ವಚನ - 668    Search  
 
ವಾಯು ನಿದ್ರೆಗೆಯ್ದಡೆ ಆಕಾಶ ಜೋಗುಳವಾಡಿತ್ತು. ಬಯಲು ಬಳಲಿದೆನೆಂದಡೆ ನಿರಾಳ ಮೊಲೆಗೊಟ್ಟಿತ್ತು. ಆಕಾಶವಡಗಿತ್ತು ಜೋಗುಳ ನಿಂದಿತ್ತು ಗುಹೇಶ್ವರನೈದಾನೆ ಇಲ್ಲದಂತೆ.
Transliteration Vāyu nidregeydaḍe ākāśa jōguḷavāḍittu. Bayalu baḷalidenendaḍe nirāḷa molegoṭṭittu. Ākāśavaḍagittu jōguḷa nindittu guhēśvaranaidāne illadante.
Music Courtesy:
English Translation 2 The wind sleeps to lullabies of sky. Space drowses, infinity gives it suck from her breast. The sky is silent. The lullaby is over. The Lord is as if He were not.

Translated by: A K Ramanujan
Book Name: Speaking Of Siva
Publisher: Penguin Books ---------------------

Hindi Translation वायु नींद करे तो आकाश लोरी गायी थी। शून्य थके तो निराला ने दूध पिलाया था। आकाश स्थब्ध हुआ, लोरी बंद हुई। गुहेश्वर रहे न रहे जैसे! Translated by: Eswara Sharma M and Govindarao B N
Tamil Translation வாயு உறங்கின் ஆகாயம் தாலாட்டுகிறது, வயல்ஞானம் மெல்ல அடங்கிட, மெய்ப்பொருள் பாலூட்டியது, ஆகாயமடங்கிட, தாலாட்டு நின்றது குஹேசுவரன் இருக்கிறான் இல்லாததனைய! Translated by: Smt. Kalyani Venkataraman, Chennai
ಶಬ್ದಾರ್ಥಗಳು ಆಕಾಶ = ಪರಮಾತ್ಮ, ಆ ಪರಮಾತ್ಮನೆ ತನ್ನ ನಿಜಸ್ವರೂಪ ಎಂದು ಅರಿತ ಶರಣ; ಆಕಾಶ = ಅದ್ವಯಾನುಭೂತಿಯಲ್ಲಿ ರಮಿಸುವ ಶರಣ; ಜೋಗುಳ = ದಿವ್ಯಗಾನ, ಪರಮಾತ್ಮನೆ ನಾನು-ಸೋsಹಂ ಎಂಬ ಪ್ರಜ್ಞಾನಾದ; ಜೋಗುಳ = ಸೋsಹಂ ಎಂಬ ಅಭೇದ ಗಾನ; ನಿದ್ರೆಗೆಯ್ = ನಿಶ್ಚಲವಾಗು; ನಿರಾಳ = ವಿಶುದ್ದ ಪರವಸ್ತು; ಬಯಲು = ಪರಮಾತ್ಮ ನಾನು ಎಂಬ ಭಾವ; ಬಳಲು = ನಿಧಾನಗೊಳ್ಳು, ನಿಧಾನವಾಗಿ ಅಡಗು; ಮೊಲೆಗೊಡು = ಸಮರಸಾನುಭವದಲ್ಲಿ ಕಾಣಬರುವ ಆನಂದಾಮೃತವನ್ನು ಉಣಿಸು; ವಾಯು = ಸದಾ ಸಂಚಲಿಸುವ ಮನಸ್ಸು; Written by: Sri Siddeswara Swamiji, Vijayapura