ಶಿಶು ತಾಯ ಮೊಲೆವಾಲನೊಸೆದುಂಡು ತೃಪ್ತನಾಗಿ
ಹೆಸರ ಬೆಸಗೊಂಬಡದು ಉಪಮೆಗೆ ಸಾಧ್ಯವಿಲ್ಲಯ್ಯಾ.
ಕಣ್ಣಾಲಿ ಕಪ್ಪ ನುಂಗಿ ಸಣ್ಣ ಬಣ್ಣಗಳುಡಿಗೆಯ
ಬಣ್ಣದೊಳಗಣ ಭ್ರಮೆ ಇನ್ನಾರಿಗಳವಡದು.
ಬಣ್ಣ ಸಮುಚ್ಚಯವಾಗಿ ಬಣ್ಣ ಬಗೆಯನೆ ನುಂಗಿ,
ಗುಹೇಶ್ವರನೆಂಬ ನಿಲವ ನಿಜದ ನಿಷ್ಪತ್ತಿ ನುಂಗಿತ್ತು.
Transliteration Śiśu tāya molevālanoseduṇḍu tr̥ptanāgi
hesara besagombaḍadu upamege sādhyavillayyā.
Kaṇṇāli kappa nuṅgi saṇṇa baṇṇagaḷuḍigeya
baṇṇadoḷagaṇa bhrame innārigaḷavaḍadu.
Baṇṇa samuccayavāgi baṇṇa bageyane nuṅgi,
guhēśvaranemba nilava nijada niṣpatti nuṅgittu.
Hindi Translation शिशु माँ के स्तन पान से तृप्त हुआ।
ना मन हीं कह सकते वह तृप्ति उपमातीत है!
आँख की पुतली का लिख निगली छोटे रंग नाश हुए,
रंगों का भ्रम और किसी को नहीं लगता ?
रंग समुच्चय होकर रंग कीरीति निगल कर,
गुहेश्वर की स्थिति निज निष्पत्ती निगली !
Translated by: Eswara Sharma M and Govindarao B N
Tamil Translation குழந்தை தாயின் முலைப்பாலை மகிழ்ந்து
அருந்தி, நிறைவுற்றதை உவமையால் விவரிக்க
வியலாததன்றோ, ஈர்க்கும் வேறுவேறுபொருட்களொடு
கூடிய உலகம் தோன்றிட, தோன்றியதனைத்திலும்
பரவியுள்ள மாயை, யாருக்கும் தென்படாது.
பின்னஞானம் அடங்கி, தான் வேறு என்பதை அகற்றி,
குஹேசுவரனெனும் நிலையையும்
முழுமையான ஞானம் விழுங்கியதன்றோ.
Translated by: Smt. Kalyani Venkataraman, Chennai
ಶಬ್ದಾರ್ಥಗಳು ಇನ್ನಾರಿಗಳವಡದು = ಇನ್ನು ಆರಿಗೂ ಅಳವಡದು, ಇನ್ನು ಯಾರಿಗೂ ಕಾಣದು, ನಿರವಶೇಷವಾಗಿ ಮರೆಯಾಗುತ್ತದೆ; ಒಸೆದು ಉಣ್ಣು = ಬಹು ಪ್ರಸನ್ನತೆಯಿಂದ ಸೇವಿಸು; ಕಣ್ಣಾಲಿ = ಲಿಂಗದ ಪ್ರತ್ಯಕ್ಷಜ್ಞಾನ, ಲಿಂಗಾನುಭವ ಜ್ಞಾನ; ಕಪ್ಪು = ಅಜ್ಞಾನಾಂಧಕಾರ, ಆಕರ್ಷಿಕವಾದ ಭಿನ್ನ ಭಿನ್ನ ವಸ್ತುಗಳಿಂದ ಕೂಡಿದ ವಿಶ್ವ ತೋರಿಕೆ; ತಾಯ ಮೊಲೆವಾಲು = ಘನಲಿಂಗದ ಅನುಭವಾಮೃತ; ನಿಷ್ಪತ್ತಿ = ಪರಿಪೂರ್ಣಸ್ಥಿತಿ; ಬಗೆ = ತಾನು, ಅನ್ಯ ಎಂಬ ಭೇದಭಾವ; ತಾನು, ಲಿಂಗ ಎಂಬ ಭಿನ್ನಜ್ಞಾನ; ಬಣ್ಣದೊಳಗಣ ಭ್ರಮೆ = ಆ ಮೋಹಕ ವಿಶ್ವ ತೋರಿಕೆಯೊಳಗೆಲ್ಲ ವ್ಯಾಪಿಸಿರುವ ಹಾಗೂ ಅದಕ್ಕೆ ಕಾರಣವಾದ ಮಾಯೆ; ಬಣ್ಣಸಮುಚ್ಚಯವಾಗು = ಖಂಡಿತಜ್ಞಾನವಳಿದು ಅಖಂಡಿತಜ್ಞಾನವಾಗು; ಶಿಶು = ಸಾಧಕನಾದ ಶರಣ; ಹೆಸರ ಬೆಸಗೊಳ್ಳು = ಹೆಸರಿಟ್ಟು ಹೇಳು, ವಿವರಿಸಿ ನುಡಿ;
Written by: Sri Siddeswara Swamiji, Vijayapura