ಬೆಣ್ಣೆಯ ಕಂದಲ ಕರಗಲಿಟ್ಟಡೆ
ಕಂದಲು ಕರಗಿತ್ತು ಬೆಣ್ಣೆ ಉಳಿಯಿತ್ತು!
ತುಂಬಿ ಇದ್ದಿತ್ತು ಪರಿಮಳವಿಲ್ಲ,
ಪರಿಮಳವಿದ್ದಿತ್ತು ತುಂಬಿಯಿಲ್ಲ.
ತಾನಿದ್ದನು ತನ್ನ ಸ್ವರೂಪವಿಲ್ಲ;
ಗುಹೇಶ್ವರನಿದ್ದನು ಲಿಂಗವಿಲ್ಲ!
Transliteration Beṇṇeya kandala karagaliṭṭaḍe
kandalu karagittu beṇṇe uḷiyittu!
Tumbi iddittu parimaḷavilla,
parimaḷaviddittu tumbiyilla.
Tāniddanu tanna svarūpavilla;
guhēśvaraniddanu liṅgavilla!
Hindi Translation माखन का मटका पिघल ने रखे तो,
मटका पिघला, माखन बचा।
भ्रमर रहा था, परिमल नहीं; परिमल रहा था, भ्रमर नहीं ;
मैं था, मेरा स्वरूप नहीं था; गुहेश्वर था, लिंग नहीं।
Translated by: Eswara Sharma M and Govindarao B N
Tamil Translation வெண்ணெயைக் கலயத்தில் உருகவைத்தால்
கலயம் உருகியது; வெண்ணெய் எஞ்சியது!
தும்பியிருந்தது மணமில்லை, மணமிருந்தது தும்பியில்லை.
தானிருந்தனன் தன்சொரூபமில்லை. குஹேசுவரன்
இருந்தனன் இலிங்கம் இல்லை!
Translated by: Smt. Kalyani Venkataraman, Chennai
ಶಬ್ದಾರ್ಥಗಳು ಕಂದಲು = ಮಣ್ಣಿನ ಪಾತ್ರೆ, ಪಂಚಭೂತಗಳಿಂದಾದ ದೇಹ; ಕರಗಲಿಡು = ಕಾಯಿಸು, ಯೋಗಸಾಧನೆಯ ಮಾಡು; ಗುಹೇಶ್ವರ = ಅಂಗ ಲಿಂಗ ಭಾವಗಳೆರಡೂ ಅಡಗಿಹೋಗಿ ಉಳಿವ ನಿರಾಳಸತ್ಯ; ತನ್ನ ಸ್ವರೂಪ = ಲಿಂಗ; ತಾನು = ಅಂಗ, ಶರಣ; ತುಂಬಿ = ಭ್ರಮರ, ಅಂಗರೂಪ ಶರಣ; ಪರಿಮಳ = ಜ್ಞಾನಘನಲಿಂಗ; ಬೆಣ್ಣೆ = ಚೈತನ್ಯಘನವಾದ ಲಿಂಗ;
Written by: Sri Siddeswara Swamiji, Vijayapura