ವಚನ - 679     
 
ತುಂಬಿ ಪರಿಮಳವನುಂಡಿತೊ? ಪರಿಮಳ ತುಂಬಿಯನುಂಡಿತೊ? ಲಿಂಗ ಪ್ರಾಣವಾಯಿತೊ? ಪ್ರಾಣ ಲಿಂಗವಾಯಿತೊ? ಗುಹೇಶ್ವರಾ, ಇವರ ಈ ಉಭಯದ ಭೇದವ ನೀನೆ ಬಲ್ಲೆ.