•  
  •  
  •  
  •  
Index   ವಚನ - 686    Search  
 
ಸತ್ಯವನೊಳಕೊಂಡ ಮಿಥ್ಯಕ್ಕೆ ಭಂಗ, ಮಿಥ್ಯವನೊಳಕೊಂಡ ಸತ್ಯಕ್ಕೆ ಭಂಗ. ಸತ್ಯ ಮಿಥ್ಯವನೊಳಕೊಂಡ ಮನಕ್ಕೆ ಭಂಗ! ಮನವನೊಳಕೊಂಡ ಜ್ಞಾನಕ್ಕೆ ಭಂಗ; ಜ್ಞಾನವನೊಳಕೊಂಡ ನಿಜಕ್ಕೆ ಭಂಗವುಂಟೆ ಗುಹೇಶ್ವರಾ?
Transliteration Satyavanoḷakoṇḍa mithyakke bhaṅga, mithyavanoḷakoṇḍa satyakke bhaṅga. Satya mithyavanoḷakoṇḍa manakke bhaṅga! Manavanoḷakoṇḍa jñānakke bhaṅga; jñānavanoḷakoṇḍa nijakke bhaṅgavuṇṭe guhēśvarā?
Hindi Translation सत्य से मिले तो मिथ्या का नाश; मिथ्या से मिले तो सत्य का नाश ; सत्य मिथ्या से मिले तो मन का भंग ! मन से मिले तो ज्ञान का भंग ; क्या ज्ञान से मिले सत्य का नाश है गुहेश्वरा ? Translated by: Eswara Sharma M and Govindarao B N
Tamil Translation உண்மையை உட்கொண்ட பொய்க்குப்பங்கம், பொய்யை உட்கொண்ட உண்மைக்குப் பங்கம், உண்மை, பொய்யை உட்கொண்ட மனத்திற்குப் பங்கம், மனத்தை உட்கொண்ட ஞானத்திற்குப் பங்கம், ஞானத்தையுட்கொண்ட உண்மைக்குப் பங்கமுண்டோ குஹேசுவரனே? Translated by: Smt. Kalyani Venkataraman, Chennai
ಶಬ್ದಾರ್ಥಗಳು ಮಿಥ್ಯ = ಮಿಥ್ಯಾಜ್ಞಾನವೃತ್ತಿ; ಮಿಥ್ಯ = ಜಗತ್ತು ಸತ್ಯವೆಂಬ ಜ್ಞಾನವೃತ್ತಿ; ಸತ್ಯ = ಸತ್ಯಜ್ಞಾನವೃತ್ತಿ; ಸತ್ಯ = ಜಗತ್ತು ಮಿಥ್ಯವೆಂಬ ಜ್ಞಾನವೃತ್ತಿ; Written by: Sri Siddeswara Swamiji, Vijayapura