'ನಾ' 'ನೀ' ಎಂಬ ಭೇದ ಅಂದೂ ಇಲ್ಲ,
ಇಂದೂ ಇಲ್ಲ
ಸಾಲೋಕ್ಯನಲ್ಲ ಸಾಮೀಪ್ಯನಲ್ಲ ಶರಣ.
ಸಾರೂಪ್ಯನಲ್ಲ ಸಾಯುಜ್ಯನಲ್ಲ ಶರಣ.
ಕಾಯನಲ್ಲ ಅಕಾಯನಲ್ಲ
ಗುಹೇಶ್ವರಲಿಂಗ ತಾನೆಯಾಗಿ.
Transliteration Nā' 'nī' emba bhēda andū illa,
indū illa
sālōkyanalla sāmīpyanalla śaraṇa.
Sārūpyanalla sāyujyanalla śaraṇa.
Kāyanalla akāyanalla
guhēśvaraliṅga tāneyāgi.
Hindi Translation 'मैं' 'तु' जैसा भेद उस दिन नहीं,
आज भी नहीं, कभी भी नहीं ।
सालोक्य नहीं, सामीप्य नहीं शरण।
सारूप्य नहीं, सायुज्य नहीं शरण।
काया नहीं, अकाया नहीं, गुहेश्वर लिंग खुद होकर।
Translated by: Eswara Sharma M and Govindarao B N
Tamil Translation நான்! நீ எனும் பேதம் அன்றும் இல்லை,
இன்றும் இல்லை என்றென்றுமில்லை,
சாலோக்கியமன்று, சாமீப்யனல்ல சரணன்.
சாரூப்யனல்ல, ஸாயுஜ்ஜியனல்ல சரணன்.
உடலுள்ளவனன்று, உடலற்றவனன்று
குஹேசுவரலிங்கமே ஆகியுள்ளானன்றோ.
Translated by: Smt. Kalyani Venkataraman, Chennai
ಶಬ್ದಾರ್ಥಗಳು ಅಂದು = ಸೃಷ್ಟಿಯ ಮುಂಚೆ; ಅಕಾಯ = ನಿರ್ದೇಹ; ಇಂದು = ಸೃಷ್ಟಿಯ ಕಾಲದಲ್ಲಿ; ಕಾಯ = ದೇಹ; ನಾನು = ನಿಜೈಕ್ಯವಡೆದ ಶರಣ; ನೀನು = ನಿಜತತ್ವ್ತವಾದ ಮಹಾಘನ; ಸಾಮೀಪ್ಯ = ಆ ದೇವನ ಸಾನ್ನಿಧ್ಯದಲ್ಲಿ ವಾಸಿಸುವುದು; ಸಾಯುಜ್ಯ = ಆ ದೇವನ ಅಂತರಂಗದಲ್ಲಿ ನೆಲೆಸುವುದು; ಸಾರೂಪ್ಯ = ಆ ದೇವನಿಗೆ ಸಮನಾದ ರೂಪವನ್ನು ಧರಿಸುವುದು; ಸಾಲೋಕ್ಯ = ತನ್ನ ಆರಾಧ್ಯದೇವತೆಯ ಲೋಕದಲ್ಲಿ ವಾಸಮಾಡುವುದು;
Written by: Sri Siddeswara Swamiji, Vijayapura