•  
  •  
  •  
  •  
Index   ವಚನ - 691    Search  
 
ನುಡಿಯಿಂದ ನಡೆಗೆಟ್ಟಿತ್ತು, ನಡೆಯಿಂದ ನುಡಿಗೆಟ್ಟಿತ್ತು. ಭಾವದ ಗುಸುಟು ಅದು ತಾನೆ ನಾಚಿ ನಿಂದಿತ್ತು. ಗುಹೇಶ್ವರನೆಂಬ ಅರಿವು ಸಿನೆ ಬಂಜೆಯಾಯಿತ್ತು.
Transliteration Nuḍiyinda naḍegeṭṭittu, naḍeyinda nuḍigeṭṭittu. Bhāvada gusuṭu adu tāne nāci nindittu. Guhēśvaranemba arivu sine ban̄jeyāyittu.
Hindi Translation बोली से चाल बिगडी , चाल से बोली बिगडी। भाव की बदबू खुद लजा खडी थी। गुहेश्वर कहने का ज्ञान पूर्ण बाँझ हुआ। Translated by: Eswara Sharma M and Govindarao B N
Tamil Translation சொல்லால் நடைகெட்டது, நடையால்சொல் கெட்டது. மிக சூட்சுமமாக ‘அகம்’ அது தானே வெட்கி நின்றது. குஹேசுவரனெனும் அறிவு முற்றிலும் அற்றதன்றோ. Translated by: Smt. Kalyani Venkataraman, Chennai
ಶಬ್ದಾರ್ಥಗಳು ನಡೆ = ಸಮರಸಾನುಭವ; ನಾಚಿನಿಲ್ಲು = ಶಾಂತವಾಗು; ನುಡಿ = ಮಾತು; ಬಂಜೆಯಾಗು = ಬರಿದಾಗು; ಭಾವದ ಗುಸುಟು = ಅತ್ಯಂತ ಸೂಕ್ಷ್ಮವಾದ, ಮಹಾಘನವು ತಾನೆಂಬ ಅಹಂ "ಭಾವಸ್ಪಂದನ"; ಸಿನೆ = ಪೂರ್ಣ; Written by: Sri Siddeswara Swamiji, Vijayapura