•  
  •  
  •  
  •  
Index   ವಚನ - 708    Search  
 
ಅಂಗದಲ್ಲಿ ಆಚಾರವ ಸ್ವಾಯತವ ಮಾಡಿಕೊಂಡನಯ್ಯಾ ಬಸವಣ್ಣನು ಆಚಾರದಲ್ಲಿ ಪ್ರಾಣವ ಸ್ವಾಯತವ ಮಾಡಿಕೊಂಡನಯ್ಯಾ ಬಸವಣ್ಣನು. ಪ್ರಾಣದಲ್ಲಿ ಲಿಂಗವ ಸ್ವಾಯತವ ಮಾಡಿಕೊಂಡನಯ್ಯಾ ಬಸವಣ್ಣನು. ಲಿಂಗದಲ್ಲಿ ಜಂಗಮವ ಸ್ವಾಯತವ ಮಾಡಿಕೊಂಡನಯ್ಯಾ ಬಸವಣ್ಣನು. ಜಂಗಮದಲ್ಲಿ ಪ್ರಸಾದವ ಸ್ವಾಯತವ ಮಾಡಿಕೊಂಡನಯ್ಯಾ ಬಸವಣ್ಣನು. ಪ್ರಸಾದದಲ್ಲಿ ನಿತ್ಯವ ಸ್ವಾಯತವ ಮಾಡಿಕೊಂಡನಯ್ಯಾ ಬಸವಣ್ಣನು. ನಿತ್ಯದಲ್ಲಿ ದಾಸೋಹವ ಸ್ವಾಯತವ ಮಾಡಿಕೊಂಡನಯ್ಯಾ ಬಸವಣ್ಣನು. ದಾಸೋಹದಲ್ಲಿ ತನ್ನ ಮರೆದು, ನಿಶ್ಚಿಂತ ನಿವಾಸಿಯಾಗಿ ಐದಾನೆ ಗುಹೇಶ್ವರಲಿಂಗದಲ್ಲಿ. ಸಂಗನಬಸವಣ್ಣನ ಶ್ರೀಪಾದಕ್ಕೆ ಶರಣೆಂದು ಧನ್ಯರಾಗಬೇಕು ನಡೆಯಾ - ಸಿದ್ಧರಾಮಯ್ಯಾ.
Transliteration Aṅgadalli ācārava svāyatava māḍikoṇḍanayyā basavaṇṇanu ācāradalli prāṇava svāyatava māḍikoṇḍanayyā basavaṇṇanu. Prāṇadalli liṅgava svāyatava māḍikoṇḍanayyā basavaṇṇanu. Liṅgadalli jaṅgamava svāyatava māḍikoṇḍanayyā basavaṇṇanu. Jaṅgamadalli prasādava svāyatava Māḍikoṇḍanayyā basavaṇṇanu. Prasādadalli nityava svāyatava māḍikoṇḍanayyā basavaṇṇanu. Nityadalli dāsōhava svāyatava māḍikoṇḍanayyā basavaṇṇanu. Dāsōhadalli tanna maredu, niścinta nivāsiyāgi aidāne guhēśvaraliṅgadalli. Saṅganabasavaṇṇana śrīpādakke śaraṇendu dhan'yarāgabēku naḍeyā - sid'dharāmayyā.
Hindi Translation अंग में आचार का स्वायत्त कर लिया बसवण्णा ने। आचार में प्राण का स्वायत्त कर लिया बसवण्णा ने। प्राण में लिंग का स्वायत्त कर लिया बसवण्णा ने। लिंग में जंगम का स्वायत्त कर लिया बसवण्णा ने। जंगम में प्रसाद का स्वायत्त कर लिया बसवण्णा ने। प्रसाद में नित्य का स्वायत्त कर लिया बसवण्णा ने। नित्य में दासोह का स्वायत्त कर लिया बसवण्णा ने। दासोह में अपने को भूल, निश्चिंत होकर रह रहा है गुहेश्वर लिंग में। संगनबसवण्णा के श्रीपाद को शरणु कहकर धन्य होना चाहिए चलो सिद्धरामय्या। Translated by: Eswara Sharma M and Govindarao B N