ಎಣ್ಣೆ ಬೇರೆ ಬತ್ತಿ ಬೇರೆ:
ಎರಡೂ ಕೂಡಿ ಸೊಡರಾಯಿತ್ತು.
ಪುಣ್ಯ ಬೇರೆ ಪಾಪ ಬೇರೆ:
ಎರಡೂ ಕೂಡಿ ಒಡಲಾಯಿತ್ತು.
ಮಿಗಬಾರದು, ಮಿಗದಿರಬಾರದು,
ಒಡಲಿಚ್ಛೆಯ ಸಲಿಸದೆ ನಿಮಿಷವಿರಬಾರದು.
ಕಾಯಗುಣವಳಿದು ಮಾಯಾಜ್ಯೋತಿ
ವಾಯುವ ಕೂಡುವ ಮುನ್ನ,
ಭಕ್ತಿಯ ಮಾಡಬಲ್ಲಡೆ ಆತನೆ ದೇವ ಗುಹೇಶ್ವರಾ.
MusicCourtesy:Album Name - Vachana Darshana, Singer - G V Atri, Music - G V Atri, Label - Jhankar Music
Hindi Translationतेल अलग, बत्ति अलग, दोनों मिलकर दीप बना,
पुण्य अलग, पाप अलग, दोनों मिलकर शरीर बना,
सीमा पार न करना, सीमा पार न करना,
शरीर की कामना पूर्ण किये बिना निमिष भी नहीं रहना है,
शरीर गण नाश होकर जीव मरने के पहले
भक्ति करनेवाला ही देव, गुहेश्वरा ।
Translated by: Eswara Sharma M and Govindarao B N
Tamil Translationஎண்ணெய் வேறு, திரி வேறு, இரண்டும் கூடி சுடராயிற்று
புண்ணியம் வேறு, பாபம் வேறு, இரண்டும் கூடி உடலாயிற்று.
மீறவியலாது. மீறவியலாது.
உடலின் விருப்பங்களைச் சுவைக்காமல்
ஒரு நிமிஷம் இருக்கவியலாது.
உடலியல்பு அழிந்து, ஜீவன் வாயுவைக் கூடுமுன்னர்
பக்தியை ஆற்றவல்லவனே இறைவன், குஹேசுவரனே.
Translated by: Smt. Kalyani Venkataraman, Chennai
ಶಬ್ದಾರ್ಥಗಳುಕಾಯಗುಣ = ದೈಹಿಕ ಶಕ್ತಿಸಾಮರ್ಥ್ಯಗಳು; ಪಾಪ = ದುಷ್ಕರ್ಮಗಳಿಂದ ಉಂಟಾದ ದುಸ್ಸಂಸ್ಕಾರ; ಪುಣ್ಯ = ಸತ್ಕರ್ಮಗಳಿಂದ ಉಂಟಾದ ಸುಸಂಸ್ಕಾರ; ಮಾಯಾಜ್ಯೋತಿ = ಮಾಯೆಯ ಮಡಿಲಲ್ಲಿ ಮೂಡಿಬಂದ ಪ್ರಜ್ಞಾಜ್ಯೋತಿ, ಜೀವಾತ್ಮ.; ವಾಯುವ ಕೂಡದ ಮುನ್ನ = ದೇಹವು ಅಳಿದು ಪಂಚಭೂತಗಳಲ್ಲಿ ಲೀನವಾಗುವ ಮುಂಚೆ; Written by: Sri Siddeswara Swamiji, Vijayapura