Index   ವಚನ - 75    Search  
 
ಹುಟ್ಟಿದಲ್ಲಿಯೆ ಹೊಂದುವುದೆಲ್ಲರಿಗೆಯೂ ಸ್ವಭಾವ. ಪುಣ್ಯಪಾಪವೆಲ್ಲರಿಗೆಯೂ ಸ್ವಭಾವ. ಮಹಾ ಶಿವತತ್ತ್ವದಲ್ಲಿ ಹುಟ್ಟಿದ ಶಿವಭಕ್ತರು, ಆಗಮ ತತ್ತ್ವದಲ್ಲಿ ಹೊಂದಿದಡೇನು? ಆ ಪುಣ್ಯಪಾಪವಿಲ್ಲಾಗಿ, ಅವರು ಮಹಾನುಭಾವರು. ಆದಡೇನು? ಲೋಕದ ಪರಿಯೆ?-ಅಲ್ಲ. ಇದ, ಲೋಕದ ಪರಿಯೆಂಬ ಅಜ್ಞಾನಿಗಳನೇನೆಂಬೆ ಗುಹೇಶ್ವರಾ.