•  
  •  
  •  
  •  
Index   ವಚನ - 76    Search  
 
ಆರೂ ಇಲ್ಲದ ಅರಣ್ಯದೊಳಗೆ ಮನೆಯ ಕಟ್ಟಿದರೆ, ಕಾಡುಗಿಚ್ಚು ಎದ್ದುಬಂದು ಹತ್ತಿತ್ತಲ್ಲಾ! ಆ ಉರಿಯೊಳಗೆ ಮನೆ ಬೇವಲ್ಲಿ, ಮನೆಯೊಡೆಯನೆತ್ತ ಹೋದನೊ? ಆ ಉರಿಯೊಳಗೆ ಬೆಂದ ಮನೆ, ಚೇಗೆಯಾಗುದದ ಕಂಡು, ಮನೆಯೊಡೆಯನಳಲುತ್ತ ಬಳಲುತ್ತೈದಾನೆ. ಗುಹೇಶ್ವರಾ, ನಿಮ್ಮ ಒಲವಿಲ್ಲದ ಠಾವ ಕಂಡು, ಮನದಲ್ಲಿ ಹೇಸಿ ತೊಲಗಿದೆನಯ್ಯಾ.
Transliteration Ārū illada araṇyadoḷage maneya kaṭṭidare, kāḍugiccu eddubandu hattittallā! Ā uriyoḷage mane bēvalli, maneyoḍeyanetta hōdano? Ā uriyoḷage benda mane, cēgeyāgudada kaṇḍu, maneyoḍeyanaḷalutta baḷaluttaidāne. Guhēśvarā, nim'ma olavillada ṭhāva kaṇḍu, manadalli hēsi tolagidenayyā.
Hindi Translation निर्जन जंगल में घर बनाये तो दावानल में आकर जला दिया ! उस ज्वाला में घर जलते समय घर का मालिक कहाँ गया ? उस ज्वाला में जलते घर नाश होते देख मालिक रोते बिलख रहा है। गुहेश्वरा तुममें अनासक्त स्थिति देख मन की घृणा से दूर हुआ। Translated by: Eswara Sharma M and Govindarao B N
Tamil Translation யாருமற்ற காட்டிலே வீட்டைக் கட்டினால் காட்டுத்தீ பரவி பற்றிக் கொண்டது. அந்தத்தீயில் வீடு எரியும் பொழுது வீட்டிற்கு உரியவன் எங்கு சென்றனனோ? அந்தத் தீயில் எரிந்த வீடு அழிவதைக் கண்டு வீட்டிற்கு உரியவன் துன்புற்றுக் கொண்டுளன் குஹேசுவரனே உம்மிடம் பக்தி அரும்பாததைக் கண்டு மனம் பொறுக்கவில்லை ஐயனே. Translated by: Smt. Kalyani Venkataraman, Chennai
ಶಬ್ದಾರ್ಥಗಳು ಅರಣ್ಯ = ಕಾಲ, ಕ್ಲೇಶ ಮತ್ತು ಭ್ರಮೆಗಳಿಂದ ತುಂಬಿಹೋದ ಭವ; ಆರೂ ಇಲ್ಲದ = ನಿರ್ಜನವಾದ, ಭಯಾನಕವಾದ ; ಕಾಡುಗಿಚ್ಚು = ಸರ್ವವಿನಾಶವಾದ ತ್ರಿತಾಪಗಳು; ಚೇಗೆಯಾಗು = ನಷ್ಟವಾಗು, ಕೈಬಿಡು, ತ್ಯಾಗಮಾಡು; ಠಾವು = ಜೀವಾತ್ಮನ ಈ ದುಃಸ್ಥಿತಿ; Written by: Sri Siddeswara Swamiji, Vijayapura