ವಚನ - 756     
 
ಅನಾದಿ ಗಣನಾಥನ ಶಿಷ್ಯನು ಆದಿ ಗಣನಾಥನು. ಆದಿ ಗಣನಾಥನ ಶಿಷ್ಯನು ಅಧ್ಯಾತ್ಮ ಗಣನಾಥನು. ಅಧ್ಯಾತ್ಮ ಗಣನಾಥನ ಶಿಷ್ಯನು ಆತ್ಮ ಗಣನಾಥನು. ಆತ್ಮ ಗಣನಾಥನ ಶಿಷ್ಯನು ವ್ಯೋಮಸಿದ್ಧ ಗಣನಾಥನು ವೋಮಸಿದ್ಧ ಗಣನಾಥನ ಶಿಷ್ಯನು ಬಸವನೆಂಬ ಗಣನಾಥನು. ಬಸವನೆಂಬ ಗಣನಾಥನ ಶಿಷ್ಯನು ಅನಿಮಿಷನೆಂಬ ಗಣನಾಥನು. ಅನಿಮಿಷನೆಂಬ ಗಣನಾಥನ ಶಿಷ್ಯನು ಅಲ್ಲಮಪ್ರಭುವೆಂಬ ಗಣನಾಥನು. ಇಂತು ಅನಾದಿವಿಡಿದು ಬಂದ ಅನುಪಮಲಿಂಗವು, ಗುಹೇಶ್ವರನೆಂಬ ಹೆಸರನೊಳಕೊಂಡು, ಎನ್ನ ಕರಸ್ಥಲಕ್ಕೆ ಸಾಧ್ಯವಾಯಿತ್ತು ಕಾಣಾ ಸಿದ್ಧರಾಮಯ್ಯಾ.