ವಚನ - 761     
 
ಅನುಭವ ಅನುಭವವೆಂಬ ಅಣ್ಣಗಳು ನೀವು ಕೇಳಿರೆ, ಅನುಭವವೆಂಬುದೊಂದು ಎತ್ತು, ಕಟ್ಟಿತ್ತು. ಆ ಎತ್ತಿದ ಕುರುಹ ಹೇಗೆಂದಡೆ ಎತ್ತು ಗೇಣುದ್ದ, ಕೊಂಬು ಮೊಳದುದ್ದ. ಕೆಟ್ಟೆಂಟು ದಿನ, ಕಂಡು ಹದಿನಾರು ದಿನ. ನಿನ್ನೆ ಮೆಟ್ಟಿದ ನಾಟಿಯ ಮೊನ್ನೆ ಮೇವುದ ಕಂಡೆ. ಗುಹೇಶ್ವರನೆಂಬ ಎತ್ತು ನಿಮ್ಮೊಳಗೈದಾನೆ, ಅರಸಿಕೊಳ್ಳಿರೊ.