•  
  •  
  •  
  •  
Index   ವಚನ - 775    Search  
 
ಅಯ್ಯಾ! ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ, ಕ್ಷುತ್ತು, ಪಿಪಾಸೆ, ಶೋಕ, ಮೋಹ, ಜನನ ಮರಣಂಗಳ, ಅಡಿಮೆಟ್ಟಿ ನಿಂದು, ಅಷ್ಟವಿಧಾರ್ಚನೆ -ಷೋಡಶೋಪಚಾರಂಗಳ ಮಾಡಿ ಶಿವನನಂತ ಲೀಲೆಗಳನರ್ಚಿಸಿ ಫಲ - ಪದ - ಮೋಕ್ಷಂಗಳ ಪಡೆಯಬೇಕೆಂಬ ಬಯಕೆಯನುಳಿದು, ಅಂತರಂಗದ ಜ್ಞಾನ, ಬಹಿರಂಗದ ಸತ್ಕ್ರಿಯಾಚಾರಂಗಳಲ್ಲಿ ದೃಢ ಚಿತ್ತದಿಂದ ನಿಂದು, ಹಿಂದೆ ಹೇಳಿದ ಸದ್ಭಕ್ತ ಮಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣಸ್ಥಲಂಗಳನೊಳಗು ಮಾಡಿಕೊಂಡು, ಪರಾತ್ಪರ ನಿತ್ಯತೃಪ್ತಾನಂದ ಮೂರ್ತಿಯಾಗಿ, ಝಗಝಗಿಸುವ ನಿಜೈಕ್ಯನಂತರಂಗದಲ್ಲಿ ಚಿದ್ರೂಪಲೀಲೆಯಿಂ ಸಾಕಾರ - ನಿರಾಕಾರ; ಸಕಲ - ನಿಃಕಲತತ್ತ್ವಂಗಳನೊಳಕೊಂಡು, ಹದಿಮೂರು ಸ್ಥಲಂಗಳ ಗರ್ಭೀಕರಿಸಿಕೊಂಡು, ಎಂಟುನೂರ ಆರುವತ್ತನಾಲ್ಕು ಮಂತ್ರಮಾಲಿಕೆಗಳ ಪಿಡಿದುಕೊಂಡು, ಇಪ್ಪತ್ತುನಾಲ್ಕು ಸಕೀಲಗರ್ಭದಿಂ ಜ್ಯೋತಿ ಜ್ಯೋತಿ ಕೂಡಿ ಭಿನ್ನ ದೋರದ ಹಾಂಗೆ ಏಕಸ್ವರೂಪಿನಿಂದ ವೇದಸ್ವರೂಪ ಮಹಾಲಿಂಗವಾಗಿ ನೆಲಸಿರ್ಪುದು ನೋಡ! ನಿರವಯಶೂನ್ಯಲಿಂಗಮೂರ್ತಿ ಗುಹೇಶ್ವರಲಿಂಗವು ಚೆನ್ನಬಸವಣ್ಣ.
Transliteration Ayyā! Kāma, krōdha, lōbha, mōha, mada, matsara, kṣuttu, pipāse, śōka, mōha, janana maraṇaṅgaḷa, aḍimeṭṭi nindu, aṣṭavidhārcane -ṣōḍaśōpacāraṅgaḷa māḍi śivanananta līlegaḷanarcisi phala - pada - mōkṣaṅgaḷa paḍeyabēkemba bayakeyanuḷidu, antaraṅgada jñāna, bahiraṅgada satkriyācāraṅgaḷalli dr̥ḍha cittadinda nindu,Hinde hēḷida sadbhakta mahēśvara prasādi prāṇaliṅgi śaraṇasthalaṅgaḷanoḷagu māḍikoṇḍu, parātpara nityatr̥ptānanda mūrtiyāgi, jhagajhagisuva nijaikyanantaraṅgadalli cidrūpalīleyiṁ sākāra - nirākāra; sakala - niḥkalatattvaṅgaḷanoḷakoṇḍu, hadimūru sthalaṅgaḷa garbhīkarisikoṇḍu, eṇṭunūra āruvattanālku mantramālikegaḷa piḍidukoṇḍu, ippattunālku sakīlagarbhadiṁ jyōti jyōti kūḍi bhinna dōrada hāṅge ēkasvarūpininda vēdasvarūpa mahāliṅgavāgi nelasirpudu nōḍa! Niravayaśūn'yaliṅgamūrti guhēśvaraliṅgavu cennabasavaṇṇa.
Hindi Translation अय्या काम क्रोध लोभ मोह मत्सर, क्षुत्पिपासा, शोक, मोह, जनन, मरण को कुचल कर खडे अष्ट विधार्चन-षोडशोपचार कर शिव के अनंत लीला अर्चना कर फल-पद-मोक्ष को पाने की चाह से, अंतरंगज्ञान, बहिरंग सत्क्रियाचारों में दृढ चित्त से खडे,पहले कहे सद्भक्त -माहेश्वर-प्रसादी-प्राणलिंगी-शरण स्थलों को मिलाकर परात्पर नित्य तृप्तानंद मूर्ति बनकर चमकते निजैक्य अनंतरंग में चिद्रूप लीला से साकार निराकार; सकल नि:कल तत्वों को मिलाकर तेरह स्थलों को जोड़कर आठसौ चौंसठ मंत्रमालिका पकडकर चौबीस रहस्य गर्भ से ज्योति ज्योति मिलाकर अभिन्न होकर एक स्वरुप से वेद स्वरूप महालिंग बनकर रह रहा है देखा। निरवय शून्य लिंगमूर्ति गुहेश्वरा लिंग चेन्नबसवण्णा। Translated by: Eswara Sharma M and Govindarao B N