ವಚನ - 784     
 
ಅಯ್ಯಾ! ತನುವಿನಾಸೆಯನಳಿದಾತನ ಸತ್ತುಚಿತ್ತಾನಂದನ ಗುರುವೆಂಬೆ. ಮನದ ಕಾಂಕ್ಷೆಯನಳಿದಾತನ ಸರ್ವಾಚಾರನ ಲಿಂಗವೆಂಬೆ ನೋಡಾ. ಭಾವದ ಭ್ರಮೆಯನಳಿದಾತನ ಷಟ್‍ಸ್ಥಲಜಂಗಮವೆಂಬೆ ನೋಡಾ. ಪ್ರಾಣನ ಪ್ರಪಂಚನಳಿದಾತನ ನಿರಾತಂಕ ನಿರಾಲಂಬ ನಿಷ್ಕಳಂಕ ನಿಜಶರಣನೆಂಬೆ ನೋಡಾ. ಈ ಚತುರ್ವಿಧ ಪಾಶವ ಗೆದ್ದಾತನ ಗುಹೇಶ್ವರಲಿಂಗವೆಂಬೆ ನೋಡಾ ಚೆನ್ನಬಸವಣ್ಣಾ.