ವಚನ - 787     
 
ಅಯ್ಯಾ! ಧರ್ಮಿಯಲ್ಲ ಕರ್ಮಿಯಲ್ಲ ನೋಡಾ! ನಿರವಯಶೂನ್ಯಲಿಂಗಮೂರ್ತಿ. ಕಾಮಿಯಲ್ಲ ನಿಃಕಾಮಿಯಲ್ಲ ನೋಡಾ! ನಿರವಯಶೂನ್ಯಲಿಂಗಮೂರ್ತಿ. ಕ್ರೋಧಿಯಲ್ಲ ನಿಃಕ್ರೋಧಿಯಲ್ಲ ನೋಡಾ! ನಿರವಯಶೂನ್ಯಲಿಂಗಮೂರ್ತಿ. ಲೋಭಿಯಲ್ಲ ನಿರ್ಲೋಭಿಯಲ್ಲ ನೋಡಾ! ನಿರವಯಶೂನ್ಯಲಿಂಗಮೂರ್ತಿ. ಮೋಹಿಯಲ್ಲ ನಿರ್ಮೋಹಿಯಲ್ಲ ನೋಡಾ! ನಿರವಯಶೂನ್ಯಲಿಂಗಮೂರ್ತಿ. ಮದದವನಲ್ಲ ನಿರ್ಮದದವನಲ್ಲ ನೋಡಾ! ನಿರವಯಶೂನ್ಯಲಿಂಗಮೂರ್ತಿ. ಮತ್ಸರದವನಲ್ಲ ನಿರ್ಮತ್ಸರದವನಲ್ಲ ನೋಡಾ! ನಿರವಯಶೂನ್ಯಲಿಂಗಮೂರ್ತಿ. ಆದೀತೆನ್ನ ಆಗದೆನ್ನ ನೋಡಾ! ನಿರವಯಶೂನ್ಯಲಿಂಗಮೂರ್ತಿ. ರೋಗವೆನ್ನ ನಿರೋಗವೆನ್ನ ನೋಡಾ! ನಿರವಯಶೂನ್ಯಲಿಂಗಮೂರ್ತಿ. ಬೇಕೆನ್ನ ಬೇಡವೆನ್ನ ನೋಡಾ! ನಿರವಯಶೂನ್ಯಲಿಂಗಮೂರ್ತಿ. ಇಂತು ಉಭಯವಳಿದ ರಾಜಾಧಿರಾಜ ಸಂಗನ ಬಸವಣ್ಣನ ಸರ್ವಾಂಗದಿ ಬೆಳಗುವ ಪರಂಜ್ಯೋತಿ ಗುಹೇಶ್ವರಲಿಂಗವು ತಾನೆ ನೋಡಾ! ಚೆನ್ನಬಸವಣ್ಣಾ. ಚೆನ್ನಬಸವಣ್ಣ.