ಅಯ್ಯಾ! ದೀಕ್ಷಾಗುರು, ಶಿಕ್ಷಾಗುರು,
ಜ್ಞಾನಗುರುಗಳೆಂಬ ತ್ರಿವಿಧ ಗುರುಗಳು,
ಕ್ರಿಯಾಲಿಂಗ, ಜ್ಞಾನಲಿಂಗ, ಭಾವಲಿಂಗವೆಂಬ
ತ್ರಿವಿಧ ಲಿಂಗಗಳು,
ಸ್ವಯ, ಚರ, ಪರವೆಂಬ ತ್ರಿವಿಧ ಜಂಗಮವು-
ಈ ಒಂಬತ್ತು ಆಚಾರಲಿಂಗದಲ್ಲಿ ಸಂಬಂಧವು.
ಕ್ರಿಯಾಗಮ, ಭಾವಾಗಮ,
ಜ್ಞಾನಾಗಮವೆಂಬ ತ್ರಿವಿಧ ಲಿಂಗಗಳು,
ಸಕಾಯ, ಆಕಾಯ, ಪರಕಾಯವೆಂಬ ತ್ರಿವಿಧ ಗುರುಗಳು,
ಧರ್ಮಾಚಾರ, ಭಾವಾಚಾರ,
ಜ್ಞಾನಾಚಾರವೆಂಬ ತ್ರಿವಿಧ ಜಂಗಮವು-
ಈ ಒಂಬತ್ತು ಗುರುಲಿಂಗದಲ್ಲಿ ಸಂಬಂಧವು.
ಕಾಯಾನುಗ್ರಹ, ಇಂದ್ರಿಯಾನುಗ್ರಹ, ಪ್ರಾಣಾನುಗ್ರಹವೆಂಬ
ತ್ರಿವಿಧ ಗುರುಗಳು
ಕಾಯಾರ್ಪಿತ, ಕರಣಾರ್ಪಿತ,
ಭಾವಾರ್ಪಿತವೆಂಬ ತ್ರಿವಿಧ ಲಿಂಗಗಳು,
ಶಿಷ್ಯ, ಶುಶ್ರೂಷ, ಸೇವ್ಯವೆಂಬ
ತ್ರಿವಿಧ ಜಂಗಮವು -
ಈ ಒಂಬತ್ತು ಶಿವಲಿಂಗದಲ್ಲಿ ಸಂಬಂಧವು.
ಈ ಮೂರು ಸ್ಥಲವು ಅನಾದಿಭಕ್ತನ ಮಾರ್ಗಕ್ರಿಯಾ ಸ್ವರೂಪ.
ಜೀವಾತ್ಮ, ಅಂತರಾತ್ಮ,
ಪರಮಾತ್ಮವೆಂಬ ತ್ರಿವಿಧಲಿಂಗಗಳು:
ನಿರ್ದೇಹಾಗಮ, ನಿರ್ಭಾವಾಗಮ,
ನಷ್ಟಾಗಮವೆಂಬ ತ್ರಿವಿಧ ಗುರುಗಳು;
ಆದಿಪ್ರಸಾದಿ, ಅಂತ್ಯಪ್ರಸಾದಿ,
ಸೇವ್ಯ ಪ್ರಸಾದಿಯೆಂಬ ತ್ರಿವಿಧ ಜಂಗಮವು-
ಈ ಒಂಬತ್ತು ಜಂಗಮಲಿಂಗದಲ್ಲಿ ಸಂಬಂಧವು.
ದೀಕ್ಷಾಪಾದೋದಕ, ಶಿಕ್ಷಾಪಾದೋದಕ,
ಜ್ಞಾನಪಾದೋದಕವೆಂಬ
ತ್ರಿವಿಧ ಲಿಂಗಂಗಳು,
ಕ್ರಿಯಾನಿಷ್ಠ, ಭಾವನಿಷ್ಠ,
ಜ್ಞಾನನಿಷ್ಠಯೆಂಬ ತ್ರಿವಿಧ ಗುರುಗಳು,
ಪಿಂಡಾಕಾಶ, ಬಿಂದ್ವಾಕಾಶ,
ಮಹದಾಕಾಶವೆಂಬ ತ್ರಿವಿಧ ಜಂಗಮವು-
ಈ ಒಂಬತ್ತು ಪ್ರಸಾದಲಿಂಗದಲ್ಲಿ ಸಂಬಂಧವು.
ಕ್ರಿಯಾಪ್ರಕಾಶ, ಭಾವಪ್ರಕಾಶ,
ಜ್ಞಾನಪ್ರಕಾಶವೆಂಬ ತ್ರಿವಿಧ ಲಿಂಗಗಳು
ಕೊಂಡದ್ದು ಪ್ರಸಾದ, ನಿಂದದ್ದು ಓಗರ,
ಚರಾಚರನಾಸ್ತಿಯೆಂಬ ತ್ರಿವಿಧ ಗುರುಗಳು,
ಭಾಂಡಸ್ಥಲ, ಭಾಜನಸ್ಥಲ,
ಅಂಗಲೇಪನಸ್ಥಲವೆಂಬ ತ್ರಿವಿಧ ಜಂಗಮವು-
ಈ ಒಂಬತ್ತು ಮಹಾಲಿಂಗದಲ್ಲಿ ಸಂಬಂಧವು.
ಈ ಮೂರು ಸ್ಥಲವು ಅನಾದಿ
ಜಂಗಮದ ಮೀರಿದ ಕ್ರಿಯಾ ಸ್ವರೂಪವು.
ಈ ಉಭಯಂ ಕೂಡಲು ಐವತ್ತುನಾಲ್ಕು ಸ್ಥಲಂಗಳಾದವು.
ಮುಂದುಳಿದ ಮೂರು ಸ್ಥಲಂಗಳಲ್ಲಿ
ಭಾವಾಭಾವನಷ್ಟಸ್ಥಲವೆ
ಮೂಲ ಗುರುಸ್ವರೂಪವಾಗಿ,
ಹದಿನೆಂಟು ಗುರುಸ್ಥಲಂಗಳನೊಳಕೊಂಡು
ಕ್ರಿಯಾಗುರುಲಿಂಗ ಜಂಗಮ ಸ್ವರೂಪವಾದ
ಇಷ್ಟಮಹಾಲಿಂಗದ ಅಧೋಪೀಠಿಕೆಯೆಂಬ ಹಲ್ಲೆಯಲ್ಲಿ
ಸ್ಪರ್ಶನೋದಕ, ಅವಧಾನೋದಕ,
ಗುರುಪಾದೋದಕ,
ಅಪ್ಯಾಯನಪ್ರಸಾದ, ಸಮಯಪ್ರಸಾದ, ಗುರುಪ್ರಸಾದ,
ಆದಿ ಪ್ರಸಾದ, ನಿಚ್ಚಪ್ರಸಾದವಾಗಿ
ತೆರಹಿಲ್ಲದೆ ಒಪ್ಪುತ್ತಿರ್ಪುದು ನೋಡಾ!
ಜ್ಞಾನಶೂನ್ಯಸ್ಥಲವೆ ಮೂಲ ಜಂಗಮಸ್ವರೂಪವಾಗಿ
ಹದಿನೆಂಟು ಚರಸ್ಥಲಂಗಳನೊಳಕೊಂಡು
ಮಹಾಜ್ಞಾನಗುರುಲಿಂಗಜಂಗಮ ಸ್ವರೂಪವಾದ
ಇಷ್ಟಮಹಾಲಿಂಗದ ಜಲರೇಖೆಯನ್ನುಳ್ಳ ಪಾನಿವಟ್ಟಲಲ್ಲಿ
ಪರಿಣಾಮೋದಕ, ನಿರ್ನಾಮೋದಕ,
ಜಂಗಮಪಾದೋದಕ, ನಿತ್ಯೋದಕ,
ಸಮತಾಪ್ರಸಾದ, ಪ್ರಸಾದಿಯ ಪ್ರಸಾದ, ಜಂಗಮ ಪ್ರಸಾದ,
ಸದ್ಭಾವ ಪ್ರಸಾದ, ಜ್ಞಾನಪ್ರಸಾದ,
ಸೇವ್ಯ ಪ್ರಸಾದ, ಅಚ್ಚ ಪ್ರಸಾದವಾಗಿ
ತೆರಹಿಲ್ಲದೆ ಒಪ್ಪುತಿರ್ಪುದು ನೋಡಾ!
ಸ್ವಯ ಪರವರಿಯದ ಸ್ಥಲವೆ ಮೂಲಲಿಂಗಸ್ವರೂಪವಾಗಿ
ಹದಿನೆಂಟು ಲಿಂಗಸ್ಥಲಂಗಳನೊಳಕೊಂಡು
ಜ್ಞಾನಗುರುಲಿಂಗ ಜಂಗಮ ಸ್ವರೂಪವಾದ
ಇಷ್ಟಮಹಾಲಿಂಗದ ಉನ್ನತವಾದ ಗೋಲಕದಲ್ಲಿ
ಅಪ್ಯಾಯನೋದಕ, ಹಸ್ತೋದಕ,
ಲಿಂಗಪಾದೋದಕ,
ಪಂಚೇಂದ್ರಿ[ಯ] ವಿರಹಿತಪ್ರಸಾದ,
ಕರಣಚತುಷ್ಟಯವಿರಹಿತ ಪ್ರಸಾದ, ಲಿಂಗಪ್ರಸಾದ
ಅಂತ್ಯಪ್ರಸಾದ ಸಮಯಪ್ರಸಾದವಾಗಿ
ತೆರಹಿಲ್ಲದೆ ಒಪ್ಪುತ್ತಿರ್ಪುದು ನೋಡ!
ಇಂತಪ್ಪ ಲಿಂಗಜಂಗಮದ ಪಾದೋದಕ
ಪ್ರಸಾದವ ಸ್ವೀಕರಿಸಿದಂಥ
ಜಂಗಮಭಕ್ತರಾದ ಸಹಜಭಕ್ತರೆ
ಪ್ರಸಾದಪಾದೋದಕ ಸಂಬಂಧಿಗಳು.
ಇವರು ಸ್ವೀಕರಿಸಿದಂಥ ಪಾದೋದಕವೆ
ನೇತ್ರದಲ್ಲಿ ಕರುಣಜಲ, ವಾಕಿನಲ್ಲಿ ವಿನಯಜಲ,
ಅಂತರಂಗದಲ್ಲಿ ಸಮತಾಜಲ-
ಇಂತೀ ತ್ರಿವಿಧೋದಕವೆ ಘಟ್ಟಿಗೊಂಡು ಸಾಕಾರವಾಗಿ,
ತಿಳಿದುಪ್ಪ ಹೆರೆದುಪ್ಪವಾದಂತೆ
ಇಷ್ಟ ಮಹಾಲಿಂಗಕ್ಕೆ ತ್ಯಾಗಾಂಗವಾದ
ಶುದ್ಧ ಪ್ರಸಾದವಾಗಿರ್ಪುದಯ್ಯ;
ಪ್ರಾಣಲಿಂಗಕ್ಕೆ ಭೋಗಾಂಗವಾದ
ಸಿದ್ಧ ಪ್ರಸಾದವಾಗಿರ್ಪುದಯ್ಯ.
ಭಾವಲಿಂಗಕ್ಕೆ ಯೋಗಾಂಗವಾದ
ಪ್ರಸಿದ್ಧ ಪ್ರಸಾದವಾಗಿರ್ಪುದಯ್ಯ.
ಇಂತೀ ತ್ರಿವಿಧ ಪ್ರಸಾದಪಾದೋದಕವೆ
ಶರಣನ ಶುದ್ಧ ಪ್ರಸಾದವೆ
ಜಿಹ್ವೆಯಲ್ಲಿ ಅಚ್ಚಪ್ರಸಾದವಾಗಿರ್ಪುದಯ್ಯ,
ಸಿದ್ಧಪ್ರಸಾದವೆ ಪಾದದಲ್ಲಿ ಸಮಯ
ಪ್ರಸಾದವಾಗಿರ್ಪುದಯ್ಯ.
ಇಂತಪ್ಪ ಶರಣಸ್ವರೂಪವಾದ ಜ್ಞಾನಲಿಂಗಜಂಗಮದ
ತೀರ್ಥಪ್ರಸಾದ ಸ್ವರೂಪವನ್ನು ಅರಿಯದೆ,
ಕ್ರಿಯಾ `ಜಂಗಮಲಿಂಗ'ದ
ತೀರ್ಥಪ್ರಸಾದವನ್ನು ತೆಗೆದುಕೊಳ್ಳಬಹುದು.
ಜ್ಞಾನಲಿಂಗಜಂಗಮ ತೀರ್ಥಪ್ರಸಾದವನ್ನು
ತೆಗೆದುಕೊಳ್ಳಲಾಗದು ಎಂಬ
ಅಜ್ಞಾನಿಗಳ ಎನಗೆ ತೋರದಿರಾ! ಗುಹೇಶ್ವರಾ!
Transliteration Ayyā! Dīkṣāguru, śikṣāguru,
jñānagurugaḷemba trividha gurugaḷu,
kriyāliṅga, jñānaliṅga, bhāvaliṅgavemba
trividha liṅgagaḷu,
svaya, cara, paravemba trividha jaṅgamavu-
ī ombattu ācāraliṅgadalli sambandhavu.
Kriyāgama, bhāvāgama,
jñānāgamavemba trividha liṅgagaḷu,
sakāya, ākāya, parakāyavemba trividha gurugaḷu,
dharmācāra, bhāvācāra,
jñānācāravemba trividha jaṅgamavu-
ī ombattu guruliṅgadalli sambandhavu.Kāyānugraha, indriyānugraha, prāṇānugrahavemba
trividha gurugaḷu
kāyārpita, karaṇārpita,
bhāvārpitavemba trividha liṅgagaḷu,
śiṣya, śuśrūṣa, sēvyavemba
trividha jaṅgamavu -
ī ombattu śivaliṅgadalli sambandhavu.
Ī mūru sthalavu anādibhaktana mārgakriyā svarūpa.
Jīvātma, antarātma,
paramātmavemba trividhaliṅgagaḷu:
Nirdēhāgama, nirbhāvāgama,
naṣṭāgamavemba trividha gurugaḷu;
ādiprasādi, antyaprasādi,Sēvya prasādiyemba trividha jaṅgamavu-
ī ombattu jaṅgamaliṅgadalli sambandhavu.
Dīkṣāpādōdaka, śikṣāpādōdaka,
jñānapādōdakavemba
trividha liṅgaṅgaḷu,
kriyāniṣṭha, bhāvaniṣṭha,
jñānaniṣṭhayemba trividha gurugaḷu,
piṇḍākāśa, bindvākāśa,
mahadākāśavemba trividha jaṅgamavu-
ī ombattu prasādaliṅgadalli sambandhavu.
Kriyāprakāśa, bhāvaprakāśa,
jñānaprakāśavemba trividha liṅgagaḷu
koṇḍaddu prasāda, nindaddu ōgara,
carācaranāstiyemba trividha gurugaḷu,
bhāṇḍasthala, bhājanasthala,
Aṅgalēpanasthalavemba trividha jaṅgamavu-
ī ombattu mahāliṅgadalli sambandhavu.
Ī mūru sthalavu anādi
jaṅgamada mīrida kriyā svarūpavu.
Ī ubhayaṁ kūḍalu aivattunālku sthalaṅgaḷādavu.
Munduḷida mūru sthalaṅgaḷalli
bhāvābhāvanaṣṭasthalave
mūla gurusvarūpavāgi,
hadineṇṭu gurusthalaṅgaḷanoḷakoṇḍu
kriyāguruliṅga jaṅgama svarūpavāda
iṣṭamahāliṅgada adhōpīṭhikeyemba halleyalli
sparśanōdaka, avadhānōdaka,
gurupādōdaka,
Apyāyanaprasāda, samayaprasāda, guruprasāda,
ādi prasāda, niccaprasādavāgi
terahillade opputtirpudu nōḍā!
Jñānaśūn'yasthalave mūla jaṅgamasvarūpavāgi
hadineṇṭu carasthalaṅgaḷanoḷakoṇḍu
mahājñānaguruliṅgajaṅgama svarūpavāda
iṣṭamahāliṅgada jalarēkheyannuḷḷa pānivaṭṭalalli
pariṇāmōdaka, nirnāmōdaka,
jaṅgamapādōdaka, nityōdaka,
Samatāprasāda, prasādiya prasāda, jaṅgama prasāda,
sadbhāva prasāda, jñānaprasāda,
sēvya prasāda, acca prasādavāgi
terahillade opputirpudu nōḍā!
Svaya paravariyada sthalave mūlaliṅgasvarūpavāgi
hadineṇṭu liṅgasthalaṅgaḷanoḷakoṇḍu
jñānaguruliṅga jaṅgama svarūpavāda
iṣṭamahāliṅgada unnatavāda gōlakadalli
apyāyanōdaka, hastōdaka,
liṅgapādōdaka,
Pan̄cēndri[ya] virahitaprasāda,
karaṇacatuṣṭayavirahita prasāda, liṅgaprasāda
antyaprasāda samayaprasādavāgi
terahillade opputtirpudu nōḍa!
Intappa liṅgajaṅgamada pādōdaka
prasādava svīkarisidantha
jaṅgamabhaktarāda sahajabhaktare
prasādapādōdaka sambandhigaḷu.
Ivaru svīkarisidantha pādōdakave
nētradalli karuṇajala, vākinalli vinayajala,
antaraṅgadalli samatājala-Intī trividhōdakave ghaṭṭigoṇḍu sākāravāgi,
tiḷiduppa hereduppavādante
iṣṭa mahāliṅgakke tyāgāṅgavāda
śud'dha prasādavāgirpudayya;
prāṇaliṅgakke bhōgāṅgavāda
sid'dha prasādavāgirpudayya.
Bhāvaliṅgakke yōgāṅgavāda
prasid'dha prasādavāgirpudayya.
Intī trividha prasādapādōdakave
śaraṇana śud'dha prasādave
jihveyalli accaprasādavāgirpudayya,
sid'dhaprasādave pādadalli samaya
prasādavāgirpudayya.
Intappa śaraṇasvarūpavāda jñānaliṅgajaṅgamada
tīrthaprasāda svarūpavannu ariyade,
kriyā `jaṅgamaliṅga'da
Tīrthaprasādavannu tegedukoḷḷabahudu.
Jñānaliṅgajaṅgama tīrthaprasādavannu
tegedukoḷḷalāgadu emba
ajñānigaḷa enage tōradirā! Guhēśvarā!
Hindi Translation अय्या दीक्षागुरु, शिक्षागुरु, ज्ञानगुरु जैसे त्रिविध गुरु;
क्रियालिंग, ज्ञानलिंग, भावलिंग जैसे त्रिविध लिंग;
स्वय, चर, पर जैसे त्रिविध जंगम-
इन नौ आचारलिंग में संबंध हैं।
क्रियागम, भवागम, ज्ञानागम जैसे त्रिविध लिंग,
सकाय अकाय, परकाय जैसे त्रिविध गुरु,
धर्माचार, भावाचार, ज्ञानाचार जैसे त्रिविध जंगम।
इन नौ गुरुलिंग में संबंध हैं।
कायानुग्रह, इंद्रियानुग्रह, प्राणानुग्रह जैसे त्रिविध गुरु।
कायार्पित, करणार्पित, भावार्पित जैसे त्रिविध लिंग;
शिष्य, शुश्रूश, संख्या जैसे त्रिविध जंगम-
इन नौ शिवलिंग में संबंध हैं।
ये तीनों स्थल अनादि भक्त का मार्ग क्रियास्वरूप हैं।
जीवात्मा, अंतरात्मा, परमात्मा जैसे त्रिविध लिंग;
निर्देहागम, निर्भावागम, नष्टागम जैसे त्रिविध गुरु।
आदिप्रसादी, अंत्यप्रसादी सेव्यप्रसादी जैसे त्रिविध जंगम,
इन नौ जंगम लिंग में संबंध हैं।
दीक्षापादोदक, शिक्षापादोदक, ज्ञानपादोदक, जैसे त्रिविध लिंग,
क्रियानिष्ट, भावनिष्ट, ज्ञाननिष्ट जैसे त्रिविध गुरु;
इन नौ प्रसाद लिंग में संबंध हैं।
क्रियाप्रकाश, भावप्रकाश, ज्ञानप्रकाश जैसे त्रिविध लिंग
पाया प्रसाद, खडा आहार,
चराचर नास्तिक जैसे त्रिविध गुरु;
भांडस्थल, भाजनस्थल, अंगलेपन जैसे त्रिविध जंगम
इन नौ महालिंग में संबंध हैं।
ये तीनोंस्थल अनादि जंगम से परे क्रिया स्वरूप हैं।
ये दोनों मिलकर चौवन स्थल हुए।आगे बचे
तीन स्थलों में भावाभाव नष्टस्थल ही मूलगुरू स्वरूप बने
अठारह गुरू स्थलों को मिलाकर
क्रियागुरुलिंग जंगम स्वरूप बने
इष्ट महालिंग की अधो पीठिका जैसे आवरण में
स्पर्शनोदक, अवघानोदक, गुरुपादोदक,
आप्यायन प्रसाद, समय प्रसाद, गुरु प्रसाद,
आदि प्रसाद, नित्य प्रसाद बने बिना रुके चल रहा देख
ज्ञान शून्य स्थल ही मूल जंगम स्वरूप बने
अठारह चर स्थलों को मिलाकर
महाज्ञान गुरु लिंग जंगम स्वरूप बने
इष्ट महा लिंग की जलरेखा रही पानी थाली में
परिणामोदक, निर्नामोदक, जंगमपदोदक, नित्योदक
समता प्रसाद, प्रसादी का प्रसाद, जंगम प्रसाद, सद्भाव प्रसाद,
ज्ञान प्रसाद, सेव्य प्रसाद,
शुद्ध प्रसाद, बिना रुके शोभित था देख।
स्वय-पर न ज्ञान स्थल ही मूल लिंग स्वरूप बने
अठा रह लिंग स्थलों को मिलकर
ज्ञान गुरु लिंग जंगम स्वरूप बना
इष्ट महा लिंग के उन्नत गोलक में
आप्यायनोदक, हस्तोदक, लिंगपादोदक,
पंचेद्रीय विरहित प्रसाद,
करण चतुष्टय विरहित प्रसाद, लिंगप्रसाद,
अंत्यप्रसाद, समयप्रसाद, बिना रुके शोभित था देख
ऐसे लिंग जंगम के पदोदक, प्रसाद स्वीकार किये
जंगम भक्त सहज भक्ति ही प्रसाद पादोदक संबंधि
इनसे स्वीकृत पदोदक ही
नेत्र में करुणजल, वाक् में विनयजल, अंतरंग में समता जल
ऐसे त्रिविधोदक ही गाढ बने साकार होकर,
गला घी, गाढा घी बने जैसे
इस्ट महालिंग को त्यागांग बना शुद्ध प्रसाद हुआ है!
प्राणलिंग को भोगांग बना सिद्ध प्रसाद हुआ है।
भावलिंग को योगांग बना प्रसिद्ध प्रसाद हुआ है।
ऐसे त्रिविध प्रसादपादोदक ही
शरण का शुद्ध, प्रसाद ही जिह्वा में शुद्ध प्रसाद हुआ है।
सिद्ध प्रसाद ही पाद में समय प्रसाद हुआ है।
ऐसे शरण स्वरूप बना ज्ञान लिंग जंगम के
तीर्थप्रसाद स्वरूप न जाने
क्रिया जंगमलिंग के तीर्थ प्रसाद को ले सकते हैं।
ज्ञान लिंग जंगम तीर्थ प्रसाद को मत लेना चाहिए
ऐसे अज्ञानियों को मुझे मत दिखाना गुहेश्वरा।
Translated by: Eswara Sharma M and Govindarao B N