ಅಯ್ಯಾ! ಪ್ರಾಣ, ಅಪಾನ, ವ್ಯಾನ, ಉದಾನ, ಸಮಾನ,
ನಾಗ, ಕೂರ್ಮ, ಕೃಕರ, ದೇವದತ್ತ, ಧನಂಜಯವೆಂಬ
ದಶವಾಯು ಪ್ರಾಣಗುಣಂಗಳ ನಷ್ಟವ ಮಾಡಿ
ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ,
ಧಾನ್ಯ, ಧಾರಣ, ಸಮಾಧಿಯೆಂಬ ಅಷ್ಟಾಂಗಯೋಗ
ಜಡಶೈವಮಾರ್ಗವನುಳಿದು,
ನಿಭ್ರಾಂತ, ನಿಶ್ಚಿಂತ, ನಿರ್ಗುಣಾನಂದಲೀಲೆಯನರಿದು,
ಹಿಂದೆ ಹೇಳಿದ
ಸದ್ಭಕ್ತ-ಮಹೇಶ-ಪ್ರಸಾದಿಸ್ಥಲವ ಅಂಗವ ಮಾಡಿಕೊಂಡು
ಸರ್ವಾಂಗಲೋಚನಮೂರ್ತಿಯಾಗಿ ಪ್ರಭಾವಿಸುವ
ನಿಜಪ್ರಾಣಲಿಂಗಿಯಂತರಂಗದಲ್ಲಿ ಚಿನ್ಮಯ ಸ್ವರೂಪಲೀಲೆಯಿಂ
ಸಮಸ್ತ ತತ್ತ್ವಾನುಭಾವವನೊಳಗು ಮಾಡಿಕೊಂಡು
ಹದಿನಾಲ್ಕು ಸ್ಥಲಂಗಳ ಗರ್ಭೀಕರಿಸಿಕೊಂಡು
ಐದು ಸಾವಿರದ ನೂರ ಎಂಬತ್ತುನಾಲ್ಕು
ಮಂತ್ರಮಾಲೆಗಳ ಪಿಡಿದುಕೊಂಡು
ಇಪ್ಪತ್ತುನಾಲ್ಕು ಸಕೀಲಗರ್ಭದಿಂ,
ಬಂಗಾರ ಲೋಹವನೊಳಕೊಂಡಂತೆ,
ತನ್ನ ಸೋಂಕಿದವರೆಲ್ಲ ತನ್ನಂತೆಯೆಂಬ
ಗುರುವಚನೋಕ್ತಿಪ್ರಮಾಣದಿಂದೆ
ಶಬ್ದದೊಳಗೆ ನಿಃಶಬ್ದವಡಗಿರ್ಪ
ಹಾಂಗೆ ಏಕಸ್ವರೂಪಿನಿಂದೆ
ಯಜನಸ್ವರೂಪಮೂರ್ತಿ ಜಂಗಮಲಿಂಗವಾಗಿ
ನೆಲಸಿರ್ಪುದು ನೋಡ!
ನಿರವಯಶೂನ್ಯಲಿಂಗಮೂರ್ತಿ
ಗುಹೇಶ್ವರಲಿಂಗವು ಚೆನ್ನಬಸವಣ್ಣಾ.
Transliteration Ayyā! Prāṇa, apāna, vyāna, udāna, samāna,
nāga, kūrma, kr̥kara, dēvadatta, dhanan̄jayavemba
daśavāyu prāṇaguṇaṅgaḷa naṣṭava māḍi
yama, niyama, āsana, prāṇāyāma, pratyāhāra,
dhān'ya, dhāraṇa, samādhiyemba aṣṭāṅgayōga
jaḍaśaivamārgavanuḷidu,
nibhrānta, niścinta, nirguṇānandalīleyanaridu,
hinde hēḷidaSadbhakta-mahēśa-prasādisthalava aṅgava māḍikoṇḍu
sarvāṅgalōcanamūrtiyāgi prabhāvisuva
nijaprāṇaliṅgiyantaraṅgadalli cinmaya svarūpalīleyiṁ
samasta tattvānubhāvavanoḷagu māḍikoṇḍu
hadinālku sthalaṅgaḷa garbhīkarisikoṇḍu
aidu sāvirada nūra embattunālku
mantramālegaḷa piḍidukoṇḍu
ippattunālku sakīlagarbhadiṁ,
baṅgāra lōhavanoḷakoṇḍante,
Tanna sōṅkidavarella tannanteyemba
guruvacanōktipramāṇadinde
śabdadoḷage niḥśabdavaḍagirpa
hāṅge ēkasvarūpininde
yajanasvarūpamūrti jaṅgamaliṅgavāgi
nelasirpudu nōḍa!
Niravayaśūn'yaliṅgamūrti
guhēśvaraliṅgavu cennabasavaṇṇā.
Hindi Translation अय्या, प्राण, अपान, व्यान, उदान समान,
नाग, कूर्म, कृकर, देवदत्त, धनंजय जैसे
दशवायु प्राण गुणों को नष्टकर
यम, नियम, आसन, प्राणायाम, प्रत्याहार,
ध्यान,धारण, समाधि जैसे हठयोग जड शैव मार्ग छोड,
निभ्रांत, निश्चिंत, निर्गुणानंद लीला समय, पहले कहें
सद्भक्त-महेश-प्रसादी स्थल को अंग बनाकर
सर्वांग लोचन मूर्ति बनकर प्रभाव
निज प्रणलिंग अंतरंग में चिन्मय स्वरूप लीला से
समस्त तत्वानुभाव मिलाकर
चौदह स्थलों को जोडकर
पाँच हजार एक सौ चौरासी मंत्र मालाऍ॑ पकडे
चौबीस रहस्य गर्भ से सोना लोहा मिले जैसे,
अपने को छुए सब अपने जैसे गुरु वचनोक्ति प्रमाण से
शब्द में निःश्ब्द में छिपे जैसे एक स्वरूप से
यज्ञ स्वरूप मूर्ति जंगम लिंग बनकर स्थिर रहे देख
निरवय शून्य लिंगमूर्ति गुहेश्वर लिंग
चेन्नबसवण्णा।
Translated by: Eswara Sharma M and Govindarao B N