ಅಯ್ಯಾ! ಮುಂದೆ ಮರ್ತ್ಯಲೋಕದ ಮಹಾಗಣಂಗಳು
ಸದ್ಭಕ್ತಿ, ಸದಾಚಾರ, ಸತ್ಕ್ರಿಯಾ, ಸಮ್ಯಜ್ಞಾನ,
ಆಜ್ಞಾದೀಕ್ಷೆ ಮೊದಲಾದ ಇಪ್ಪತ್ತೊಂದು ದೀಕ್ಷೆಯ ವಿಚಾರ,
ತ್ರಿವಿಧ ಸ್ಥಲ, ಷಟ್ಸ್ಥಲ, ದಶವಿಧಪಾದೋದಕ,
ಏಕಾದಶಪ್ರಸಾದ, ಷೋಡಶಾವರಣ,
ನೂರೆಂಟುಸಕೀಲು ಮೊದಲಾದ
ಸಮಸ್ತಸಕೀಲದ ಅರ್ಪಿತ-ಅವಧಾನಂಗಳು,
ಮೂಲಪ್ರಣಮ ಮೊದಲಾಗಿ ಮಹಾಮಂತ್ರಗಳು,
ಸರ್ವಾಚಾರ ಸಂಪತ್ತಿನ ಲಿಂಗಾನುಭಾವದ
ನಡೆ-ನುಡಿಯ ವಿಚಾರವು
ಷಡ್ವಿಧಶೀಲ, ಷಡ್ವಿಧವ್ರತ, ಷಡ್ವಿಧನೇಮದ
ಕಲೆನೆಲೆಯ ಸನ್ಮಾರ್ಗವು,
ಇಂತೀ ಸ್ವಸ್ವರೂಪುನಿಲುಕಡೆಯ
ನಿಷ್ಕಲಂಕ ಪರಶಿವಮೂರ್ತಿ ಸದ್ಗುರು
ಲಿಂಗಜಂಗಮದಿಂ ಪಡೆದು
ಪರುಷಮುಟ್ಟಿದ ಲೋಹ ಬಂಗಾರವಾಗಿ
ಮರಳಿ ಲೋಹವಾಗದಂತೆ,
ಪಾವನಾರ್ತವಾಗಿ ಸ್ವಯ-ಚರ-ಪರ,
ಆದಿ-ಅಂತ್ಯ-ಸೇವ್ಯಸ್ಥಲ ಮೊದಲಾದ
ಷಟ್ಸ್ಥಲಮಾರ್ಗವಿಡಿದಾಚರಿಸುವಲ್ಲಿ
ಭಕ್ತಮಾಹೇಶ್ವರ ಶರಣಗಣಂಗಳು ಸಮಪಂಙ್ತಿಯಲ್ಲಿ
ಸುಗಂಧ, ಸುರಸ, ಸುರೂಪು,
ಸುಸ್ಪರ್ಶನ ಸುಶಬ್ದ, [ಸುಪರಿಣಾಮ],
ಮಧುರ, ಒಗರು, ಕಾರ, ಹುಳಿ, ಕಹಿ, ಲವಣ, ಪಂಚಾಮೃತ
ಮೊದಲಾದ ಪದಾರ್ಥದ
ಪೂರ್ವಾಶ್ರಯವ ಕಳೆದು,
ಮಹಾಘನಲಿಂಗಮುಖದಲ್ಲಿ
ಶುದ್ಧ-ಸಿದ್ಧ-ಪ್ರಸಿದ್ಧ, ರೂಪು-ರುಚಿ-ತೃಪ್ತಿಗಳ
ಮಹಾಮಂತ್ರ ಧ್ಯಾನದಿಂದ ಸಮರ್ಪಿಸಿ
ಆ ಲಿಂಗದ ಗರ್ಭದಿ ನೆಲಸಿರ್ಪ ನಿರಂಜನಜಂಗಮದಿಂ
ಮಹಾಪ್ರಸಾದವ ಪಡೆದು,
ತಾನೆ ಪ್ರಾಣಲಿಂಗವೆಂದು ಎರಡಳಿದು,
ಪರಿಶಿವಲಿಂಗಲೀಲೆಯಿಂ ಭೋಗಿಸುವ
ಸಮಪಂಙ್ತಿಯ ಮಧ್ಯದಲ್ಲಿ
ಆವ ಗಣಂಗಳಾದರು ಸರಿಯೆ,
ಪ್ರಸಾದ ನಮಗೆ ಹೆಚ್ಚಾಯಿತ್ತೆಂದು
ತ್ರಿವಿಧದೀಕ್ಷಾಹೀನವಾದ ಉಪಾಧಿಲಿಂಗಭಕ್ತಂಗೆ
ಒಲ್ಮೆಯಿಂದ ಶರಣಾಗೆಂದು
ಕೊಡುವವನೊಬ್ಬ ಅಯೋಗ್ಯನು!
ಅಥವಾ ಗುರುಮಾರ್ಗದಾಚರಣೆಯ
ತಿಳಿಯದೆ ಕೊಟ್ಟಲ್ಲಿ,
ಇಂತು ಕೊಂಡ ಭಕ್ತನು ಬಹುನಿಜದಿಂದ ಆ ಪ್ರಸಾದವೆ
ಪ್ರಾಣವಾಗಿದ್ದುದ ನೋಡಿ,
ಮುಂದೆ ಷಟ್ಸ್ಥಲಲಿಂಗಾನುಭಾವ ಸದ್ಭಕ್ತ ಶರಣಗಣಂಗಳು
ಕೊಟ್ಟಾತಂಗೆ ಇಂತು ಕೊಡದಂತೆ ಆಜ್ಞೆಯ ಮಾಡಿ,
ಕೊಂಡಂಥವರ ದುರ್ಗುಣಗಳ ಬಿಡಿಸಿ,
ವೇಧಾಮಂತ್ರಕ್ರಿಯೆ ಹಸ್ತಮಸ್ತಕಸಂಯೋಗ ಮೊದಲಾದ
ಇಪ್ಪತ್ತೊಂದು ದೀಕ್ಷೆಯ ಸದ್ಗುರುವಿನಿಂ ಮಾಡಿಸಿ,
ಸದಾಚಾರವ ಬೋಧಿಸಿ,
ಅಷ್ಟಾವರಣದ ಗೊತ್ತ ಸರ್ವಾಂಗಲಿಂಗದಿ ತೋರಿ,
ಅನಾದಿಜಂಗಮಪ್ರಸಿದ್ಧ ಪ್ರಸಾದ
ಪಾದೋದಕವ ಕೊಟ್ಟುಕೊಂಬುದೆ
ಸದಾಚಾರ ಸನ್ಮಾರ್ಗ ನೋಡ!
ಗುಹೇಶ್ವರಲಿಂಗಕ್ಕೆ ಚೆನ್ನಬಸವಣ್ಣ.
Transliteration Ayyā! Munde martyalōkada mahāgaṇaṅgaḷu
sadbhakti, sadācāra, satkriyā, samyajñāna,
ājñādīkṣe modalāda ippattondu dīkṣeya vicāra,
trividha sthala, ṣaṭsthala, daśavidhapādōdaka,
ēkādaśaprasāda, ṣōḍaśāvaraṇa,
nūreṇṭusakīlu modalāda
samastasakīlada arpita-avadhānaṅgaḷu,
mūlapraṇama modalāgi mahāmantragaḷu,
sarvācāra sampattina liṅgānubhāvada
naḍe-nuḍiya vicāravu
ṣaḍvidhaśīla, ṣaḍvidhavrata, ṣaḍvidhanēmada
kaleneleya sanmārgavu,
Intī svasvarūpunilukaḍeya
niṣkalaṅka paraśivamūrti sadguru
liṅgajaṅgamadiṁ paḍedu
paruṣamuṭṭida lōha baṅgāravāgi
maraḷi lōhavāgadante,
pāvanārtavāgi svaya-cara-para,
ādi-antya-sēvyasthala modalāda
ṣaṭsthalamārgaviḍidācarisuvalli
bhaktamāhēśvara śaraṇagaṇaṅgaḷu samapaṅṅtiyalli
sugandha, surasa, surūpu,
susparśana suśabda, [supariṇāma],Madhura, ogaru, kāra, huḷi, kahi, lavaṇa, pan̄cāmr̥ta
modalāda padārthada
pūrvāśrayava kaḷedu,
mahāghanaliṅgamukhadalli
śud'dha-sid'dha-prasid'dha, rūpu-ruci-tr̥ptigaḷa
mahāmantra dhyānadinda samarpisi
ā liṅgada garbhadi nelasirpa niran̄janajaṅgamadiṁ
mahāprasādava paḍedu,
tāne prāṇaliṅgavendu eraḍaḷidu,
pariśivaliṅgalīleyiṁ bhōgisuva
samapaṅṅtiya madhyadalli
āva gaṇaṅgaḷādaru sariye,
Prasāda namage heccāyittendu
trividhadīkṣāhīnavāda upādhiliṅgabhaktaṅge
olmeyinda śaraṇāgendu
koḍuvavanobba ayōgyanu!
Athavā gurumārgadācaraṇeya
tiḷiyade koṭṭalli,
intu koṇḍa bhaktanu bahunijadinda ā prasādave
prāṇavāgidduda nōḍi,
munde ṣaṭsthalaliṅgānubhāva sadbhakta śaraṇagaṇaṅgaḷu
koṭṭātaṅge intu koḍadante ājñeya māḍi,
koṇḍanthavara durguṇagaḷa biḍisi,
vēdhāmantrakriye hastamastakasanyōga modalāda
ippattondu dīkṣeya sadguruviniṁ māḍisi,
sadācārava bōdhisi,
Aṣṭāvaraṇada gotta sarvāṅgaliṅgadi tōri,
anādijaṅgamaprasid'dha prasāda
pādōdakava koṭṭukombude
sadācāra sanmārga nōḍa!
Guhēśvaraliṅgakke cennabasavaṇṇa.
Hindi Translation अय्या! आगे मर्त्य लोक के महागण
सद्भक्ति, सदाचार, सत्क्रिया, सम्यज्ञान
आज्ञादीक्षा आदि इक्कीस दीक्षा के विचार,
त्रिविध स्थल- षट्स्थल
दशाविध पादोदक, एकादश प्रसाद, षोडशावरण,
एक सौ आठ रहस्य आदि समस्त रहस्य अर्पित अवधान,
मूल प्रणव आदि महामंत्र,
सर्वाचार संपत्ती का लिंगानुभाव की बोलचाल के विचार
षड्विध शील, षड्विध व्रत, षड्विध नेम के स्थिति कला सन्मार्ग,
ऐसे स्वस्वरूप की स्थिति
निष्कलंक परशिवमूर्ति सद्गुरु लिंग से पाकर
परुष स्पर्श से लोह सोना बनने के बाद फिर न लोहे बनने जैसे
पावनार्थ स्वय-चर-पर-आदि–अंत्य–सेव्यस्थल आदि
षट्स्थल मार्ग पर चलकर भक्त माहेश्वर शरण गण सम पंक्ति में
सुगंध, सुरस, सुरूप, सुस्पर्श-सुशब्द
मधुर, खार, तीखा, खट्टा, कडवा, लवण, पंचामृत
आदि पदार्थों का
पूर्वाश्रय छूटकर महाघनलिंग मुख में
शुद्ध –सिद्ध- प्रसिद्ध –रुप-रुचि –तृप्ति के महामंत्र ध्यान से समर्पित कर
उस लिंग के गर्भ में स्थित निरंजन जंगम से महाप्रसाद पाकर,
खुद प्राणलिंग समझ, दो मिठाकर,
परशिव लिंग लीला से भोग करने समपंक्ति के बीच में
कोई गण हो सही, प्रसाद ह में ज्यादा हुआ कहें
त्रिविध दीक्षाहीन हुआ उपाधि लिंग भक्त को
प्यार से शरण में आऒ कहकर देनेवाला एक अयोग्य।
अथवा गुरु मार्ग के आचरण बिना जाने दिये तो,
ऎसे लिया भक्त सत्य से वह प्रसाद ही
प्राण हुआ देख
आगे षट्स्थल लिंगानुभाव सद्भक्त शरण गण
दिये हुए को इस तरह नहीं देना आज्ञाकर,
लिए हुए को दुर्गुण दूरकर
वेधा मंत्र क्रिया हस्त मस्त क संयोग आदि
इक्कीस दीक्षा सद्गुरु से करवाकर सदाचार बोधकर,
अष्टावरण को लक्ष्य सर्वांग लिंग में दिखाकर ,
अनादि जंगम प्रसिद्ध प्रसाद पादोदक दे लेना ही
सदाचार सन्मार्ग देख गुहेश्वर लिंग को चेन्नबसवण्णा।
Translated by: Eswara Sharma M and Govindarao B N