ಅಯ್ಯಾ! 'ವಿಶ್ವತೋಚಕ್ಷುರುತ' ಎಂಬುದಾಗಿ,
ಜಗವೆಲ್ಲ ನೇತ್ರಂಗಳಾಗಿರ್ಪನು ಶಿವನು.
ಜಗವೆಲ್ಲ ನೇತ್ರವಾಗಿದ್ದರೆ,
ನೇತ್ರದೊಳಗುತ್ತಮ ಮಧ್ಯಮ ಕನಿಷ್ಠಂಗಳು
ಏಕಾದವು? ಎಂದಡೆ ಹೇಳಿಹೆವು ಕೇಳಿರಯ್ಯ:
ನೇತ್ರಕ್ಕೆ ನೇತ್ರವಾದ ಜಗನೇತ್ರಕ್ಕೆ
ಪ್ರಕಾಶನಾಗಿ ತನ್ನ ತೋರದೆ ಇದ್ದಂಥಾ,
ಶ್ರೀಗುರು ಕರುಣಾಕಟಾಕ್ಷೆಯಿಂದ ಉದಯವಾದ
ಇಷ್ಟಮಹಾಜ್ಯೋತಿರ್ಲಿಂಗವನು
ನೋಡಿದ ನೇತ್ರವೆ ಲಿಂಗನೇತ್ರವು.
ಅದೇ ಸದ್ಧರ್ಮಸ್ವರೂಪವಾದ ಉತ್ತಮವೆನಿಸುವುದು.
ಅಯ್ಯಾ, ಖಗಮೃಗ ಫಣಿಕೀಟಕಾದಿಗಳ ನೇತ್ರಂಗಳು
ಉಭಯಕರ್ಮಕ್ಕೆ ಒಳಗಿಲ್ಲಾಗಿ
ದೃಷ್ಟಿದೋಷವಿಲ್ಲಾಗಿ ಅದು ಮಧ್ಯಮವೆನಿಸುವುದು.
ಅಯ್ಯಾ, ಇಷ್ಟಮಹಾಜ್ಯೋತಿರ್ಲಿಂಗಬಾಹ್ಯವಾಗಿ
ಪಂಚಮಹಾಪಾತಕ ಸೂತಕಂಗಳಲ್ಲಿ
ವರ್ತಿಸುವ ಆಪಾತ್ರಜೀವಿಗಳಾದ
ಭವಿಗಳ ನೇತ್ರಂಗಳು ಉಭಯಕ್ಕೆ ಅನುಕೂಲವಾದ ಕಾರಣ
ಚರ್ಮಚಕ್ಷುವೆಂದು, ತನ್ನತಾನರಿಯದ ಗಾಡಾಂಧಕಾರವೆಂದು
ಮೀನುಗಳೆಂದು ವಿಷನೇತ್ರವೆಂದು
ಮನ್ಮಥನ ಕೈಗೆ ಸಿಲುಕಿದ ನೀಲೋತ್ಪಲಬಾಣವೆಂದು,
ತಾಮಸಾಗ್ನಿಯೆಂದು ಕುರೂಪದ ನೇತ್ರೇಂದ್ರಿಯವೆಂದು,
ಶಿವಾಚಾರ ಸದ್ಧರ್ಮಿಗಳ ನಿಂದಿಸುವ
ಮಹಾಪಾತಕ ದೃಷ್ಟಿಯೆಂದು ಹೇಳಲ್ಪಟ್ಟಿತ್ತು.
ಇಷ್ಟಲಿಂಗವಿಲ್ಲಾದ ಕಾರಣ ಕನಿಷ್ಠಚಕ್ಷುವೆಂದುದು ನೋಡಾ.
ಅಯ್ಯಾ, ಅದರಿಂದ ಸದ್ಭಕ್ತ ಶರಣಗಣಂಗಳು
ಅರ್ಚನೆ ಅರ್ಪಿತದ್ರವ್ಯವ ಕೊಡದೆ,
ಅವರೊಡನೆ ಸಂಭಾಷಣೆ ದರ್ಶನ ಸ್ಪರ್ಶನವ ಮಾಡಲಿಲ್ಲ ನೋಡಾ
ಗುಹೇಶ್ವರಲಿಂಗದಲ್ಲಿ ಸಿದ್ಧರಾಮಯ್ಯ.
Transliteration Ayyā! 'Viśvatōcakṣuruta' embudāgi,
jagavella nētraṅgaḷāgirpanu śivanu.
Jagavella nētravāgiddare,
nētradoḷaguttama madhyama kaniṣṭhaṅgaḷu
ēkādavu? Endaḍe hēḷihevu kēḷirayya:
Nētrakke nētravāda jaganētrakke
prakāśanāgi tanna tōrade iddanthā,
śrīguru karuṇākaṭākṣeyinda udayavāda
iṣṭamahājyōtirliṅgavanu
nōḍida nētrave liṅganētravu.
Adē sad'dharmasvarūpavāda uttamavenisuvudu.
Ayyā, khagamr̥ga phaṇikīṭakādigaḷa nētraṅgaḷu
ubhayakarmakke oḷagillāgi
dr̥ṣṭidōṣavillāgi adu madhyamavenisuvudu.
Ayyā, iṣṭamahājyōtirliṅgabāhyavāgi
pan̄camahāpātaka sūtakaṅgaḷalli
vartisuva āpātrajīvigaḷāda
bhavigaḷa nētraṅgaḷu ubhayakke anukūlavāda kāraṇa
carmacakṣuvendu, tannatānariyada gāḍāndhakāravendu
mīnugaḷendu viṣanētravendu
Manmathana kaige silukida nīlōtpalabāṇavendu,
tāmasāgniyendu kurūpada nētrēndriyavendu,
śivācāra sad'dharmigaḷa nindisuva
mahāpātaka dr̥ṣṭiyendu hēḷalpaṭṭittu.
Iṣṭaliṅgavillāda kāraṇa kaniṣṭhacakṣuvendudu nōḍā.
Ayyā, adarinda sadbhakta śaraṇagaṇaṅgaḷu
arcane arpitadravyava koḍade,
avaroḍane sambhāṣaṇe darśana sparśanava māḍalilla nōḍā
guhēśvaraliṅgadalli sid'dharāmayya.
Hindi Translation अय्या, ’विश्वतोचक्षुरुत’ कहने से,
सारा जग नेत्र बने हुए हैं शिव।
सारा जग नेत्र हुए तो, नेत्र में उत्तम मध्यम कनिष्ट
क्यों हुए? ये कैसे हुए कहें तो सुनिए –
नेत्र का नेत्र बने जग नेत्र को प्रकाश हुआ अपने को बिना दिखाये जैसे
श्रीगुरु करुणाकटाक्षा से उदय हुआ
इष्ट महाज्योतिर्लिंग को देखा नेत्र ही लिंग नेत्र है।
वहीं सद्धर्म स्वरुप हुआ उत्तम कहलानेवाला।
अय्या, खग मृग फणि कीडादि नेत्र उभयकर्म में न मिलने से
दृष्टिदोष न होने से वह मध्यम कहलायेगा।
अय्या, इष्टमहा ज्योतिर्लिंग बाह्य बने
पंच महापातक सूतकों में रहने से
अपात्र जीव हुए भवि के नेत्र उभय को अनुकूल होने के कारण
चर्मचक्षु जैसे, अपने को आप जाने गाढांधकार से
मछली जैसे विषनेत्र जैसे
मन्मथ के हाथ में मिले नीलोत्पल बाण जैसे तामसाग्नि जैसे
कुरुप नेत्रेंद्रिय समझ, शिवाचार सद्धर्मियों की निंदा करनेवाली
मह पातक दृष्टि जैसे कहने लगी थी।
इष्टलिंग न रहने के कारण कनिष्ट चक्षु कहलाये देखा अय्या।
इससे सद्भक्त शरण गण अर्चनार्पित द्रव्य न देने से ,
उनके साथ संभाषण दर्शन स्पर्शन किया नहीं देखा।
गुहेश्वर लिंग में सिद्धरामय्या।
Translated by: Eswara Sharma M and Govindarao B N