ಅಯ್ಯಾ! ಸದಾಚಾರಸದ್ಭಕ್ತಿಯಿಲ್ಲದ ಗುರುವು ನರಜೀವಿ.
ಆತನಿಂದ ಹುಟ್ಟಿದ ಲಿಂಗಾಂಗವೆರಡು ಜಡಜೀವಿ.
ಅವರಿಬ್ಬರಲ್ಲಿ ಹೊಕ್ಕು ಕೊಟ್ಟು
ಕೊಂಬುವ ಜಂಗಮ ಭೂತಪ್ರಾಣಿ.
ಈ ನರಜೀವಿ, ಜಡಜೀವಿ, ಭೂತಪ್ರಾಣಿಗಳಿಗೆ
ಕೊಟ್ಟುಕೊಂಬ ಭಕ್ತಂಗೆ
ಏಳನೆಯ ಪಾತಕ ಬಿಡದು ಕಾಣಾ.
ಗುಹೇಶ್ವರಲಿಂಗದ ಸದಾಚಾರಸದ್ಭಕ್ತಿಯಿಂದಲ್ಲದೆ
ಮುಕ್ತಿಯಿಲ್ಲ ನೋಡಾ, ಚೆನ್ನಬಸವಣ್ಣ.
Transliteration Ayyā! Sadācārasadbhaktiyillada guruvu narajīvi.
Ātaninda huṭṭida liṅgāṅgaveraḍu jaḍajīvi.
Avaribbaralli hokku koṭṭu
kombuva jaṅgama bhūtaprāṇi.
Ī narajīvi, jaḍajīvi, bhūtaprāṇigaḷige
koṭṭukomba bhaktaṅge
ēḷaneya pātaka biḍadu kāṇā.
Guhēśvaraliṅgada sadācārasadbhaktiyindallade
muktiyilla nōḍā, cennabasavaṇṇa.
Hindi Translation अय्या बिना सदाचार सद्भक्ति गुरु नरजीवी।
उससे पैदा हुए लिंगांग दोनों जड जीवी।
उन दोनों में मिलकर ले देना जंगम भूत प्राणी।
यह नरजीवी जडजीवी भूत प्राणि यों को देले भक्त को
सातवाँ पातक न छोडता देखा।
गुहेश्वरलिंग की सदाचार सद्भक्ति मुक्ती नहीं देख
चेन्नबसवण्णा।
Translated by: Eswara Sharma M and Govindarao B N