ಬಂದ ಬಟ್ಟೆಯ ನಿಂದು ನೋಡದೆ,
ಬಂದ ಬಟ್ಟೆಯ ಕಂಡು ಸುಖಿಯಾದೆ.
ನಿಂದ ನಿಲುವ ಮುಂದುಗೆಡಿಸಿ, ನಿಂದನಿಲವ ಮುಂದುಗೊಂಡಿತ್ತು.
ತಂದೆ ಮಕ್ಕಳ ಗುಣ ಒಂದು ಭಾವದೊಳಡಗಿ,
ಸಂದಿಲ್ಲದ ಕಾಲೊಳಗೆ ಕೈ ಮೂಡಿತ್ತು.
ಒಂದೊಂದನೆ ಹಿಡಿದು ಒಂದೊಂದನೆ ಬಿಟ್ಟಡೆ
ಇದು ನಮ್ಮ ಗುಹೇಶ್ವರನ ಸದ್ಭಕ್ತಿಯಾಯಿತ್ತೈ ಸಂಗನಬಸವಣ್ಣಾ.
Hindi Translationपहले आये रास्ते को खड़े होकर बिना देखे
अभी आया रास्ता देखकर सुखी हुआ।
खड़ी स्थिति को भूलकर
अभी आयी स्थिति प्रिय लगी।
पिता-पुत्र एक भाव में समाकर
मिलकर कार्य में लगे।
एक को पकड़ दूसरे को छोड़ने से
आज हमारे गुहेश्वर की भक्ति पूर्ण हुई संगन बसवण्णा ।
Translated by: Eswara Sharma M and Govindarao B N
English Translation
Tamil Translationவந்த வழியை நின்று கவனிக்காமல்
எதிரிலுள்ள வழியைக் கண்டு மகிழ்ந்தனை.
முன்பு வாழ்ந்த வாழ்வினை விடுத்து
சிவபதம் எனும் வழியில் முன்னேறுவாய்.
தந்தை மக்களின் இயல்பு ஒருமித்த எண்ணத்திலிருக்க
தூய்மையான நல்லியல்புகள் எழும்பின.
ஒன்றினை ஏற்று, ஒன்றினைக் கைவிடின்
இன்று நம் குஹேசுவரனுக்கு அது
மேலான பக்தி ஆயிற்று அன்றோ!
Translated by: Smt. Kalyani Venkataraman, Chennai
Telugu Translation
Urdu Translation
ಸ್ಥಲ -
ಭಕ್ತಸ್ಥಲ
ಶಬ್ದಾರ್ಥಗಳುಒಂದನೆ ಬಿಟ್ಟಡೆ = ಭವಪಥವ ತ್ಯಜಿಸಿ.; ಒಂದನೆ ಹಿಡಿದು = ಶಿವಪಥವ ಹಿಡಿದು; ಕೈಮೂಡಿತ್ತು = ಅರ್ಚನಾದಿ ರೂಪ ಸತ್ಕ್ರಿಯೆ ಅಳವಟ್ಟಿತ್ತು.; ಗುಣ = ಶುಚಿತ್ವ; ತಂದೆ ಮಕ್ಕಳು = ಗುರುಶಿಷ್ಯರು.; ನಿಂದ ನಿಲವ = ಈ ಹಿಂದೆ ಭವದ ಬಟ್ಟೆಯಲ್ಲಿ ನಿಂದಾಗಿನ ಬದುಕು; ನಿಂದ ನಿಲವು = ಶಿವಪಥದಲ್ಲಿ ನಿಂದಾಗಿನ ಬದುಕು; ಬಂದ ಬಟ್ಟೆ = ಎಲ್ಲರೂ ನಡೆದು ಬಂದ ಬಟ್ಟೆ, ಭವದ ದಾರಿ; ಭಾವ = ಲಿಂಗಭಾವ; ಮುಂದುಗೆಡಸು = ಸಂಪೂರ್ಣವಾಗಿ ಅಳಿಸಿಹಾಕು, ಮರೆತುಬಿಡು; ಮುಂದುಗೊಂಡಿತ್ತು = ತನ್ನೆದುರು ಪ್ರಿಯವಾಗಿ ಕಾಣಬಂದಿತ್ತು.; ಸಂದಿಲ್ಲದ ಕಾಲೊಳಗೆ = ಅವಿರತವಾದ ಸದಾಚರಣೆಯಲ್ಲಿ; Written by: Sri Siddeswara Swamiji, Vijayapura