ಆಚಾರವೆ ಸ್ವರೂಪವಾದ ಕುರುಹಿನ ಅಂಗವಿಡಿದು
ಅಂಗ ಅನಂಗವೆಂಬವೆರಡೂ ಹೊದ್ದದ ಮಹಿಮ
ನೀನು ನೋಡಾ, ಚೆನ್ನಬಸವಣ್ಣಾ!
ಅಂಗವೆ ಆಚಾರವಾಗಿ ಇರುಬಲ್ಲೆ
ಆಚಾರವೆ ಅಂಗವಾಗಿ ಇರಬಲ್ಲೆಯಾಗಿ
ಅಂಗವಿಲ್ಲದ ಅಪ್ರತಿಮನು ನೀನು ನೋಡಾ.
ಆಚಾರವೆ ಆಯತ, ಆಚಾರವೆ ಸ್ವಾಯತ
ಆಚಾರವೆ ಸನ್ನಿಹಿತ
ಆಚಾರವೆ ಪ್ರಾಣವಾಗಿಪ್ಪೆಯಾಗಿ
ಎನ್ನ ಗುಹೇಶ್ವರಲಿಂಗದಲ್ಲಿ
ನಿನ್ನ ಆಚಾರ ಭಿಕ್ಷವನಿಕ್ಕು ಚೆನ್ನಬಸವಣ್ಣಾ.
Transliteration Ācārave svarūpavāda kuruhina aṅgaviḍidu
aṅga anaṅgavembaveraḍū hoddada mahima
nīnu nōḍā, cennabasavaṇṇā!
Aṅgave ācāravāgi iruballe
ācārave aṅgavāgi iraballeyāgi
aṅgavillada apratimanu nīnu nōḍā.
Ācārave āyata, ācārave svāyata
ācārave sannihita
ācārave prāṇavāgippeyāgi
enna guhēśvaraliṅgadalli
ninna ācāra bhikṣavanikku cennabasavaṇṇā.
Hindi Translation आचार ही स्वरूप बने पहचान का अंग पकड़े
अंग अनंग जैसे दोनों के बिना अनुकरण की महिमा
तू देखा, चेन्नबसवण्णा।
अंग ही आचार बने रह सकते
आचार ही अंग बने रहने से
बिना अंग तू अप्रतिम देखा।
आचार ही आयत, आचार ही स्वायत,
आचार ही सन्निहित, आचार ही प्राण बने जैसे
मेरे गुहेश्वर लिंग में तेरी आचार भिक्षा दो चेन्नबसवण्णा।
Translated by: Eswara Sharma M and Govindarao B N