•  
  •  
  •  
  •  
Index   ವಚನ - 874    Search  
 
ಆದಿ ಅನಾದಿ ಎಂಬೆರಡರ ಮೂಲವನೆತ್ತಿ ತೋರಿದನಯ್ಯಾ ಬಸವಣ್ಣನು. ಆದಿ ಲಿಂಗ ಅನಾದಿ ಜಂಗಮವೆಂಬ ಭೇದವ, ವಿವರಿಸಿ ತೋರಿದನಯ್ಯಾ ಬಸವಣ್ಣನು. ಕಾಯದ ಜೀವದ ಸಂಬಂಧವ, ಅಸಂಬಂಧವ ಮಾಡಿ ತೋರಿದನಯ್ಯಾ ಬಸವಣ್ಣನು. ಎನ್ನ ಆದಿ ಅನಾದಿಯನು ಬಸವಣ್ಣನಿಂದರಿದು ಗುಹೇಶ್ವರಲಿಂಗದಲ್ಲಿ ಸುಖಿಯಾದೆನು ಕಾಣಾ ಚೆನ್ನಬಸವಣ್ಣ.
Transliteration Ādi anādi emberaḍara mūlavanetti tōridanayyā basavaṇṇanu. Ādi liṅga anādi jaṅgamavemba bhēdava, vivarisi tōridanayyā basavaṇṇanu. Kāyada jīvada sambandhava, asambandhava māḍi tōridanayyā basavaṇṇanu. Enna ādi anādiyanu basavaṇṇanindaridu guhēśvaraliṅgadalli sukhiyādenu kāṇā cennabasavaṇṇa.
Hindi Translation आदि अनादि जैसे दो मूल उठा दिखाया बसवण्णा ने। आदि लिंग अनादि जंगम जैसे भेद का, विवरण दिखाया अय्या बसवण्णा ने काय जीव के संबंध को, असंबंधकर दिखाया बसवण्णा ने। मेरे आदि अनादि को बसवण्णा से जानकर गुहेश्वरालिंग में सुखी हुआ देखा चेन्नबसवण्ण। Translated by: Eswara Sharma M and Govindarao B N