ವಚನ - 897     
 
ಆದಿಯಿಲ್ಲದೆ, ಕರ್ತೃವಿಲ್ಲದೆ, ಕರ್ಮಂಗಳಿಲ್ಲದೆ ನಿನ್ನಿಂದ ನೀನೇ ಸಗುಣನಯ್ಯಾ. ನಿನ್ನ ಸ್ವಲೀಲೆವಿಡಿದಾಡಿ ನಿನ್ನಿಂದ ನೀನೇ ನಿರ್ಗುಣನಯ್ಯಾ. ಅದೆಂತೆಂದಡೆ: ``ಅನಾದಿ ಸಿದ್ಧ ಸಂಸ್ಕಾರಃ ಕರ್ತೃ ಕರ್ಮ ವಿವರ್ಜಿತಃ| ಸ್ವಯಮೇವ ಭವೇದ್ದೇಹೇ ಸ್ವಯಮೇವ ವಿಲೀಯತೇ''|| ಎಂದುದಾಗಿ, ಗುಹೇಶ್ವರಾ, ನಿನ್ನ ಲೀಲೆಯ ಘನವ ನೀನೇ ಬಲ್ಲೆ.