•  
  •  
  •  
  •  
Index   ವಚನ - 910    Search  
 
ಆರು ಅಂಕಣದೊಳಗಾರು ದರುಶನ ಪೂಜೆ, ಆರೂಢರೂಢಾದಿ ಯೋಗಿಗಳಿರುತ್ತಿರಲು, ಆರಾರಿಂದತ್ತತ್ತ ವಿೂರಿ ತೋರುವ ಸ್ವಯಂಜ್ಯೋತಿ ಇರಲು, ಬೇರೆಯರಸಲುಂಟೆ ಶಿವಯೋಗವು? ಆರು ಅಂಕಣದೊಳಗೆ ಆರು ಮಂದಿಯ ಸಂದಣಿಯ ಓಲಗದ ಸಡಗರವೆಂದು ಆರೂಢ ಯೋಗಿಗಳದನೆಣಿಕೆಗೊಳರು. ಮೂರು ಮನೆಯ ಮತ್ತೆ ದಾಳಿಗೊಳುವ ಕಾರಣಿಕರವಲ್ಲವಾಗಿ ವಿೂರಿ ಒಂಬತ್ತು ಗೊಪೆಯೊಳು ಲಯ ಗಮನ ಸ್ಥಿತ್ಯರ್ಥಂಗಳ ಹಂಗಿಲ್ಲದ ಹಂಗಿನಲ್ಲಿ ನೀನು ನಿನ್ನಲ್ಲಿ ಪತಂಗನ್ಯಾಯದಂತೆ ಗುಹೇಶ್ವರನೊಳೊಂದು ಕಂಡಾ.
Transliteration Āru aṅkaṇadoḷagāru daruśana pūje, ārūḍharūḍhādi yōgigaḷiruttiralu, ārārindattatta viūri tōruva svayan̄jyōti iralu, bēreyarasaluṇṭe śivayōgavu? Āru aṅkaṇadoḷage āru mandiya sandaṇiya ōlagada saḍagaravendu ārūḍha yōgigaḷadaneṇikegoḷaru. Mūru maneya matte dāḷigoḷuva kāraṇikaravallavāgi viūri ombattu gopeyoḷu laya gamana sthityarthaṅgaḷa haṅgillada haṅginalli nīnu ninnalli pataṅgan'yāyadante guhēśvaranoḷondu kaṇḍā.
Hindi Translation छः शहतीरों में छः दर्शन पूजा, आरुढ आरुढादि योगी रहते हुए, छः छः से उधर उधर पार दिखाती स्वयं ज्योति रहते, दूसरा ढूंढ सकता शिवयोग? छः शहतीरों में छः लोग मिले हुए वाद्य के संभ्रम में आरुढ योगी गमन नहीं देते। तीन घरों पर फिर आक्रमण कारणिक न होने से पार नौ समूहों में लय गमन स्थित्यंतर बिना आश्रय के आश्रय में तू तुझमें पतंगन्याय जैसे गुहेश्वर में मिला देखा। Translated by: Eswara Sharma M and Govindarao B N