ವಚನ - 917     
 
ಆವ ಜಾತಿಯಾದಡೂ ಆಗಲಿ; ಪುರಾತನ ಚಾರಿತ್ರದಲ್ಲಿ ನಡೆದು, ಗುರುಲಿಂಗಜಂಗಮಕ್ಕೆ ಅರ್ಥಪ್ರಾಣಾಭಿಮಾನಮಂ ಕೊಟ್ಟು, ಅಹಂಕಾರವಳಿದಿಹಂತಹ ಮಹಾತ್ಮರ ಬಾಯ ತಂಬುಲವ ಮೆಲುವೆ, ಬೀಳುಡಿಗೆಯ ಹೊದಿವೆ. ಅವರ ಪಾದರಕ್ಷೆಗಳೆರಡನೂ, ಮಂಡೆಯ ಮೇಲೆ ಹೊತ್ತುಕೊಂಡು ಬದುಕುವೆನಯ್ಯಾ. ಆ ಗಣಂಗಳ ದಾಸನ ದಾಸ ನಾನು, ಜನ್ಮ ಜನ್ಮದಲ್ಲಿ ಆಗುವೆ ಕಾಣಾ ಗುಹೇಶ್ವರಾ.